ದೇಶ

ದೇಶವಿರೋಧಿ ಘೋಷಣೆ ಪ್ರಕರಣ ಯೋಜಿತ ಪಿತೂರಿ: ಜೆಎನ್ ಯು ಪ್ರಾಧ್ಯಾಪಕಿ

Srinivas Rao BV

ನವದೆಹಲಿ: ಜೆ ಎನ್ ಯು ನಲ್ಲಿ ಅಫ್ಜಲ್ ಗುರುವಿನ ಪರ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಕೇಳಿಬಂದ ಪ್ರಕರಣ ಪೂರ್ವ ಯೋಜಿತ ಪಿತೂರಿ ಎಂದು ಜೆ ಎನ್ ಯು ಪ್ರಾಧ್ಯಾಪಕಿ ಜಯತಿ ಘೋಷ್ ಹೇಳಿದ್ದಾರೆ.
ವಿಶ್ವವಿದ್ಯಾನಿಲಯದ ತೇಜೋವಧೆ ಮಾಡುವುದಕ್ಕಾಗಿ ಇಂಥದ್ದೊಂದು ಪಿತೂರಿಯನ್ನು ಉನ್ನತ ಮಟ್ಟದಲ್ಲಿ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಮುಸುಕು ಧರಿಸಿ ಭಾಗವಹಿಸಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ವ್ಯಕ್ತಿಗಳು ಗುಪ್ತಚರ ಇಲಾಖೆಯವರು ಎಂಬುದು ನಮ್ಮ ಅನುಮಾನ ಎಂದು ಎನ್ ಡಿ ಎ ಒಕ್ಕೂಟದ ರಾಷ್ಟ್ರವಿರೋಧಿ ನೀತಿಗಳ ಬಗ್ಗೆ ಮಾತನಾಡಿದ ಜೆಎನ್ ಯು ಪ್ರಾಧ್ಯಾಪಕಿ ಹಾಗೂ ಖ್ಯಾತ ಅರ್ಥತಜ್ಞರಾದ ಜಯತಿ ಘೋಷ್ ತಿಳಿಸಿದ್ದಾರೆ.
ಜೆಎನ್ ಯು ನಲ್ಲಿ ಯೋಚನಾ ಶಕ್ತಿ ಇರುವ, ವಿಶ್ಲೇಷಣೆ ಮಾಡಲು ಸಾಮರ್ಥ್ಯವಿರುವ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ  ನಮ್ಮನ್ನು ವಿನಾಕಾರಣ ಟಾರ್ಗೆಟ್ ಮಾಡಲಾಗುತ್ತಿದೆ.  ನಮ್ಮನ್ನು ನಾವು ಸಮರ್ಥಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಘೋಷ್ ಆರೋಪಿಸಿದ್ದಾರೆ.

SCROLL FOR NEXT