ಚಂಡೀಗಢ: ಪಠಾಣ್ ಕೋಟ್ ನಲ್ಲಿ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಪಂಜಾಬ್ ಸರ್ಕಾರದ ನಡುವೆ ಬಿಲ್ ಯುದ್ಧ ಪ್ರಾರಂಭವಾಗಿದೆ.
ಜನವರಿಯಲ್ಲಿ ಉಗ್ರರ ದಾಳಿ ನಡೆದಾಗ ಪಠಾಣ್ ಕೋಟ್ ನಲ್ಲಿ ನಿಯೋಜಿಸಲಾಗಿದ್ದ ಅರೆಸೇನಾಪಡೆಗೆ ಹಣ ಪಾವತಿ ಮಾಡುವುದಕ್ಕೆ ಕೇಂದ್ರ ಸರ್ಕಾರ ಪಂಜಾಬ್ ಸರ್ಕಾರಕ್ಕೆ 6 .35 ಕೋಟಿ ಬಿಲ್ ಕಳಿಸಿದೆ. ಅರೆಸೇನಾಪಡೆಯ 20 ಕಂಪನಿಗಳಿಗೆ ಹಣ ಪಾವತಿ ಮಾಡುವಂತೆ ಕೇಂದ್ರ ಗೃಹ ಸಚಿವಾಲಯ ಪಂಜಾಬ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರತಿ ಸಂಸ್ಥೆಯ ವೆಚ್ಚ ಪ್ರತಿ ದಿನಕ್ಕೆ 1,77,143 ರೂಪಾಯಿಯಾಗಿದೆ, ಇದರೊಂದಿಗೆ ಸಾರಿಗೆ ವೆಚ್ಚವೂ ಸೇರಿ ಪಾವತಿ ಮಾಡಬೇಕಿರುವ ಹಣದ ಮೊತ್ತ 6 .35 ಕೋಟಿಯಷ್ಟಾಗಿದೆ ಎಂದು ಗೃಹ ಸಚಿವಾಲಯದ ಪತ್ರದಲ್ಲಿ ಹೇಳಲಾಗಿದೆ. ಆದರೆ 6 .35 ಕೋಟಿ ರೂಪಾಯಿ ಪಾವತಿ ಮಾಡುವುದಕ್ಕೆ ಪಂಜಾಬ್ ಸರ್ಕಾರ ನಿರಾಕರಿಸಿದೆ.