ಪಶ್ಚಿಮ ಬಂಗಾಳ: ಕಚ್ಚಾ ಬಾಂಬ್ ಸ್ಫೋಟಿಸಿದ ಪರಿಣಾಮ ತೃಣಮೂಲ ಕಾಂಗ್ರೆಸ್ ಮೂರು ಕಾರ್ಯಕರ್ತರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಲ್ಲಿ ನಡೆದಿದೆ.
ಮುರ್ಶಿದಾಬಾದ್ ಪೊಲೀಸ್ ಠಾಣೆ ಸಮೀಪವೇ ಸಂಭವಿಸಿದ ಈ ಸ್ಫೋಟದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನೂ ಕಚ್ಚಾ ಬಾಂಬ್ ಗಳಿರುವ ಮೂರು ಕಂಟೇನರ್ ಗಳು ಪತ್ತೆಯಾಗಿವೆ.
ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದೂ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.