ಕಳೆದ ವರ್ಷ ಪುಣೆಯಲ್ಲಿ ನಡೆದ ಮಹಿಳೆಯರ ಫಿಟ್ ನೆಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಐರಿಸ್ ಮಜು 
ದೇಶ

ಸಮರ ಕಲೆ ಕಳರಿಪಯಟ್ಟನ್ನು ವಿಶ್ವಕ್ಕೆ ಪರಿಚಯಿಸಲಿರುವ 'ಮಿಸಸ್ ಇಂಡಿಯಾ'

ಕರಾಟೆ, ಬ್ಲಾಕ್ ಬೆಲ್ಟ್, ಕಳರಿಪಯಟ್ಟು ಇತ್ಯಾದಿ ಪುರುಷ ಕೇಂದ್ರಿತ ಸಾಹಸಗಳನ್ನು ಈಗೀಗ ಮಹಿಳೆಯರೂ ಕಲಿಯುತ್ತಿದ್ದಾರೆ...

ಕೊಚ್ಚಿ: ಕರಾಟೆ, ಬ್ಲಾಕ್ ಬೆಲ್ಟ್, ಕಳರಿಪಯಟ್ಟು ಇತ್ಯಾದಿ ಪುರುಷ ಕೇಂದ್ರಿತ ಸಾಹಸಗಳನ್ನು ಈಗೀಗ ಮಹಿಳೆಯರೂ ಕಲಿಯುತ್ತಿದ್ದಾರೆ ಮತ್ತು ಅದರಲ್ಲಿ ಸೈ ಎನಿಸಿಕೊಳ್ಳುತ್ತಿದ್ದಾರೆ.
ಇವರು 37 ವರ್ಷದ ಐರಿಸ್ ಮಜು. ಕೇರಳದ ಕೊಚ್ಚಿ ಮೂಲದವರು. ಕಳೆದ ಮೂರು ತಿಂಗಳಿನಿಂದ ಪ್ರತಿದಿನ ಸಂಜೆ ಕೊಚ್ಚಿಯ ಪನಂಪಿಲ್ಲಿ ನಗರ್ ನಲ್ಲಿರುವ ಬಾಲಭವನದಲ್ಲಿ ಬಂದು ಕಳರಿಪಯಟ್ಟು ಅಭ್ಯಾಸ ಮಾಡುತ್ತಿದ್ದಾರೆ.

ಶ್ರೀ ಅಗಸ್ತ್ಯ ಕಲರಿಯ ಶಿವನ್ ಗುರುಕಲ್ ಅವರ ಬಳಿ ಮಾರ್ಗದರ್ಶನ ಪಡೆಯುತ್ತಿರುವ ಐರಿಸ್ ಮಜು ನಿತ್ಯ ಬೆವರು ಹರಿಸಿ ಕೈ ಕಾಲುಗಳಲ್ಲಿ ಕಿಕ್ ಹೊಡೆಯುತ್ತಾ ಕಳರಿಪಯಟ್ಟನ್ನು ಸಾಧನೆಯಿಂದ ಅಭ್ಯಾಸ ಮಾಡುತ್ತಿದ್ದಾರೆ. ಅವರು ಇದೇ 12ರಂದು ಚೀನಾದ ದೊಂಗೌನ್ ನಲ್ಲಿ ನಡೆಯಲಿರುವ ಮಹಿಳೆಯರ ಫಿಟ್ ನೆಸ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವರು ಈಗಾಗಲೇ ಕಳೆದ ಸಪ್ಟೆಂಬರ್ ನಲ್ಲಿ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

''ಇದೊಂದು ಪಕ್ಕಾ ಪ್ರತಿಭಾ ಸ್ಪರ್ಧೆ. ಇಲ್ಲಿ ಏನಾದರೂ ವಿಭಿನ್ನತೆಯನ್ನು ಪ್ರದರ್ಶಿಸಲು ಬಯಸುತ್ತೇನೆ. ಕಳರಿಪಯಟ್ಟು ಕೇರಳ ರಾಜ್ಯದ ಸಮರ ಕಲೆ ಆಗಿರುವುದರಿಂದ ಇದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ನನ್ನ ಬಯಕೆಯಾಗಿದೆ. ಈ ಕಲೆಯಲ್ಲಿ ಮಹಿಳೆಯರು ಹೇಗೆ ಸ್ವರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನು ಕಲಿಯಬಹುದು. ಕಳರಿ ಎಂದರೆ ಕೇವಲ ಆಯುಧಗಳನ್ನು ಬಳಸುವುದು ಎಂಬ ಕಲ್ಪನೆ ಜನರಲ್ಲಿದೆ. ಆದರೆ ಮಹಿಳೆಯರು ತಾವು ಧರಿಸಿದ ಚೂಡಿದಾರದ ಶಾಲನ್ನು ಬಳಸಬಹುದು. ಸರಿಯಾಗಿ ಕಳರಿಪಯಟ್ಟನ್ನು ಅಭ್ಯಾಸ ಮಾಡಿದರೆ ದಾಳಿಕೋರರಿಂದ ರಕ್ಷಿಸಿಕೊಳ್ಳಬಹುದು.
ಯಾರಾದರೂ ನಿಮ್ಮ ತಂಟೆಗೆ ಬಂದರೆ ಕೋಲಿನ ರೂಪದಲ್ಲಿ ನಿಮ್ಮ ಬಳಿ ಕೊಡೆಯಿದ್ದರೆ ಬಳಸಬಹುದು.ಅಲ್ಲದೆ ಕಳರಿ ಕಲಿಯುವುದರಿಂದ ನಮ್ಮ ಆರೋಗ್ಯವೂ ಉತ್ತಮವಾಗುತ್ತದೆ, ನಮ್ಮ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ, ದೇಹವನ್ನು ಸದೃಢಗೊಳಿಸುತ್ತದೆ'' ಎಂದು ಮಹಿಳೆಯರಿಗೆ ಅದರ ಉಪಯೋಗವನ್ನು ಐರಿಸ್ ವಿವರಿಸುತ್ತಾರೆ.

ಹಗಲು ಹೊತ್ತಿನಲ್ಲಿ ಐರಿಸ್ ಅವರು, ಗೌನ್ ನ್ನು ತೊಟ್ಟು ಅಭ್ಯಾಸ ಮಾಡುತ್ತಾರೆ. ಅವರು ಚೀನಾದಲ್ಲಿ ನಾಡಿದ್ದು ಭಾರತೀಯ ಸಾಂಪ್ರದಾಯಿಕ ಕಾಂಚೀವರಂ ಸೀರೆಯಲ್ಲಿ ಮಿಂಚಲಿದ್ದಾರೆ. ಅದರಲ್ಲಿ ನಮ್ಮ ರಾಷ್ಟ್ರಪಕ್ಷಿ ನವಿಲು ಮತ್ತು ರಾಷ್ಟ್ರಹಣ್ಣು ಮಾವಿನ ಹಣ್ಣಿನ ವಿನ್ಯಾಸವಿರುತ್ತದೆ. 

ಐರಿಸ್ ಮಜು ಪರಿಸರ ಉಳಿಸಿ ಹೋರಾಟದ ಕಾರ್ಯಕರ್ತೆ ಕೂಡ ಹೌದು. ಪ್ರತಿದಿನ ಅವರು 15 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಹೋಗುತ್ತಾರಂತೆ. ಇವರ ಪತಿ ಶಿಲ್ಲಾಂಗ್ ಮೂಲದ ಸೇನೆಯ ಕರ್ನಲ್ ಮಜು ಜೋಸೆಫ್. ಸೇನಾ ಸಿಬ್ಬಂದಿಗಳ ಪತ್ನಿಯರ ಅಭಿವೃದ್ಧಿ ಸಂಘದಿಂದ ಸೇನಾ ಯೋಧರು ಮತ್ತು ಸಿಬ್ಬಂದಿಗಳ ಪತ್ನಿಯರಿಗೆ ಇಂಗ್ಲೀಷ್ ಸಂವಹನ ಕೋರ್ಸ್, ಬ್ಯಾಗ್ ತಯಾರಿ ಮೊದಲಾದ ಕಸೂತಿಗಳನ್ನು ನಡೆಸುತ್ತಾರೆ.

ಮಹಿಳಾ ದಿನಾಚರಣೆ ಸಂದೇಶ: ಅನೇಕ ಮಹಿಳೆಯರು ಉದ್ಯೋಗ, ಮನೆಕೆಲಸಗಳ ಮಧ್ಯೆ ತಮ್ಮ ಆರೋಗ್ಯಕ್ಕೆ ಗಮನ ಕೊಡುವುದಿಲ್ಲ, ಆರೋಗ್ಯವೇ ಭಾಗ್ಯ. ಮಹಿಳೆಯರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಶ್ರಮಿಸಬೇಕು. ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾರೆ ಐರಿಸ್ ಮಜು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT