ಬರ್ಮೆರ್: ಕೆಟ್ಟು ನಿಂತ ಬೈಕ್, ಕಾರು, ಬಸ್ ಗಳನ್ನು ತಳ್ಳುವುದು ಸಾಮಾನ್ಯ ವಿಚಾರ. ಆದರೆ ರೈಲು ಹಳಿ ಮೇಲೆ ಜಾಮ್ ಆಗಿದ್ದ ರೈಲಿನ್ ಇಂಜಿನ್ ಅನ್ನು ಪ್ರಯಾಣಿಕರು ತಳ್ಳಿದ ಘಟನೆ ಬರ್ಮೆರ ರೈಲು ನಿಲ್ದಾಣದಲ್ಲಿ ನಡೆದಿದೆ.
ಬರ್ಮೆರ್-ಕೋಲ್ಕಾ ಎಕ್ಸ್ ಪ್ರೆಸ್ ರೈಲಿನ ಇಂಜಿನ್ ಜಾಮ್ ಆಗಿ ಹಳ್ಳಿ ಮೇಲೆ ನಿಂತಿದ್ದರಿಂದ ಪ್ರಯಾಣಿಕರು ಹಾಗೂ ರೈಲ್ವೇ ಸಿಬ್ಬಂದಿ ಸೇರಿ ರೈಲನ್ನು ತಳ್ಳಿದ್ದಾರೆ.
ಇಷ್ಟೇ ಅಲ್ಲ, 13 ಬೋಗಿಗಳ ರೈಲಿನ ಬೋಗಿಗಳನ್ನು ಬೇರ್ಪಡಿಸಿ ಒಂದೊಂದಾಗಿ ಸ್ವಚ್ಛಗೊಳಿಸುವ ಜಾಗಕ್ಕೆ ತಳ್ಳಿದ್ದಾರೆ.