ದೇಶ

ಕೇಂದ್ರ ಮಾಹಿತಿ ಆಯೋಗದಲ್ಲಿ 80% ಹುದ್ದೆ ಖಾಲಿ

Mainashree
ನವದೆಹಲಿ: ಕೇಂದ್ರ ಮಾಹಿತಿ ಆಯೋಗದಲ್ಲಿ ಶೇ.80 ರಷ್ಟು ಹುದ್ದೆಗಳು ಖಾಲಿ ಉಳಿದಿವೆ.
ಆರ್ ಟಿಐನಡಿ ಪಡೆದ ಮಾಹಿತಿ ಪ್ರಕಾರ ಕೇಂದ್ರ ಮಾಹಿತಿ ಆಯೋಗದಲ್ಲಿ ಮಂಜೂರಾದ 160 ಹುದ್ದೆಗಳಲ್ಲಿ 32 ವಿವಿಧ ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಇನ್ನು 128 ಹುದ್ದೆಗಳು ಖಾಲಿ ಉಳಿದಿವೆ ಎಂದು ಆರ್ ಟಿಐ ಅರ್ಜಿದಾರ ಆರ್ ಕೆ ಜೈನ್ ತಿಳಿಸಿದ್ದಾರೆ. 
128 ಖಾಲಿ ಹುದ್ದೆಗಳಲ್ಲಿ 32 ಸಮಾಲೋಚಕರನ್ನು ನೇಮಿಸಿಕೊಳ್ಳಲಾಗಿದ್ದು, ಪ್ರತಿ 6 ತಿಂಗಳಿಗೆ ಅವರ ಅವಧಿ ವಿಸ್ತರಣೆ ಮಾಡಲಾಗುವುದು ಎಂಬ ಮಾಹಿತಿ ದೊರಕಿದೆ.
ತಕ್ಷಣದ ಖಾಲಿ ಹುದ್ದೆಗಳಿಗೆ 32 ಸಮಾಲೋಚರಾಗಿ ನೇಮಿಸಲಾಗಿದ್ದು, ಅದರಲ್ಲಿ ಈಗಾಗಲೇ 9 ಮಂದಿ ರಾಜಿನಾಮೆ ನೀಡಿದ್ದಾರೆ. ಇನ್ನು ಜಂಟಿ ಕಾರ್ಯದರ್ಶಿ ಹುದ್ದೆ ಮತ್ತು ಅದರ ಮೇಲಿನ ಹುದ್ದೆಯನ್ನು ಸಿಬ್ಬಂದಿ ತರಬೇತಿ ಇಲಾಖೆ ಕೇಂದ್ರದ ಸಿಬ್ಬಂದಿ ಯೋಜನೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. 
ಇನ್ನು ಇತರೆ ಹುದ್ದೆಗಳಿಗೆ ನಿಯೋಜನೆ ಮೂಲಕ ಅಥವಾ ಸಿಬ್ಬಂದಿ ಆಯ್ಕೆ ಆಯೋಗ(ಎಸ್ ಎಸ್ ಸಿ) ಮೂಲಕ ನೇರವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಆಯೋಗ ವಿವರಿಸಿದೆ.
SCROLL FOR NEXT