ದೇಶ

ಕಳ್ಳಭಟ್ಟಿ ತಯಾರಿಸಿದರೆ ಗಲ್ಲು ಶಿಕ್ಷೆ!

Manjula VN

ಪಾಟ್ನ: ಮದ್ಯಮಾರಾಟ ನಿಷೇಧಿಸಿ ಈಗಾಗಲೇ ಕಾನೂನು ರೂಪಿಸಿರುವ ಬಿಹಾರ ಸರ್ಕಾರ, ಇದೀಗ ಕಳ್ಳಭಟ್ಟಿ ತಯಾರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇನ್ನು ಮುಂದೆ ಕಳ್ಳಭಟ್ಟಿ ತಯಾರಿಸುವವರಿಗೆ ಗಲ್ಲು ಶಿಕ್ಷೆ ವಿಧಿಸುವುದಾಗಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ 2016ರ ಏಪ್ರಿಲ್ 1 ರಿಂದ ಬಿಹಾರದಲ್ಲಿ ದೇಶಿಯ ಮದ್ಯಮಾರಾಟ ನಿಷೇಧ ಕಾನೂನು ಜಾರಿ ಮಾಡಿ ಕೆಲ ಸಮಯದ ಹಿಂದೆ ಜೆಡಿಯು ಸರ್ಕಾರ ಆದೇಶ ಹೊರಡಿಸಿತ್ತು.

ಈ ಕಾನೂನು ಜಾರಿಯಾದ ಬಳಿಕ ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾಗಿದ್ದವರಿಗೆ ಗಲ್ಲು ಶಿಕ್ಷೆ ನೀಡಬಹುದಾದಂಥ ಕಾನೂನು ಕೂಡ ಜಾರಿಯಾಗಲಿದೆ. ಈ ಕುರಿತ ಮಸೂದೆಯನ್ನು ಪ್ರಸಕ್ತ ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆಯೇ ಆಂಗೀಕರಿಸಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಟಿಸಿದ್ದಾರೆ.

ಏ.1ರಿಂದ ದೇಶೀಯ ಮದ್ಯಗಳ ಮಾರಾಟಕ್ಕೆ ಪೂರ್ಣ ನಿಷೇಧವಿರಲಿದೆ. ಆದರೆ, ದೇಶೀಯವಾಗಿ ಉತ್ಪಾದಿಸಿದ ವಿದೇಶಿ ಮದ್ಯಗಳನ್ನು ಆಯ್ದ ಮಳಿಗೆಗಳಲ್ಲಿ ಮಾತ್ರವೇ ಮಾರಾಟ ಮಾಡಲಾಗುವುದು.

SCROLL FOR NEXT