ದೇಶ

ಶಾರದಾ ಚಿಟ್ ಫಂಡ್ ಹಗರಣ: ಚಿದಂಬರಂ ಪತ್ನಿ ನಳಿನಿಗೆ ಸಮನ್ಸ್

Mainashree
ನವದೆಹಲಿ: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ಮಾಜಿ ಕೇಂದ್ರ ಸಚಿವ ಚಿದಂಬರಂ ಪತ್ನಿ ನಳಿನಿ ಚಿದಂಬರಂ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. 
ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸಿಬಿಐ ಕೇಂದ್ರ ಕಚೇರಿಗೆ ಬರಬೇಕು ಎಂದು ಫ್ಯಾಕ್ಸ್ ಮೂಲಕ ಸಮನ್ಸ್ ಕಳುಹಿಸಲಾಗಿದೆ. 
ಶಾರಾದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ನಳಿನಿ ಚಿದಂಬರಂ ಅವರ ಹೆಸರು ಸೇರಿಸಿದ್ದು, ನಳಿನಿ ಅವರು ಪ್ರತ್ಯಕ್ಷವಾಗಿಯೋ, ಇಲ್ಲವೇ ಪರೋಕ್ಷವಾಗಿಯೋ ಶಾರದಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. 
ಶಾರದಾ ಗ್ರೂಪ್ ನ ಮನೋರಂಜನ್ ಸಿನ್ಹಾ ಅವರಿಗೆ ನಳಿನಿ ಚಿದಂಬರಂ ವಕೀಲೆಯಾಗಿದ್ದರು. ಶಾರದಾ ಸ್ಕ್ಯಾಮ್ ನ ಹಣವನ್ನು ನಳಿನಿ ಚಿದಂಬರಂ ಅವರ ಲಾಯರ್ ಶುಲ್ಕವಾಗಿ ನೀಡಲಾಗಿದೆ ಎಂದು ಶಾರದಾ ಗ್ರೂಪ್ ನ ಅಧ್ಯಕ್ಷ ಸುದೀಪ್ತಾ ಸೇನ್ ಸಿಬಿಐ ಗೆ ಬರೆದ ಪತ್ರದಲ್ಲಿ ಹೇಳಿದ್ದರು.
ಬ್ಯಾಂಕ್ ನ ಮಾಹಿತಿ ಪ್ರಕಾರ ನಳಿನಿ ಚಿದಂಬರಂ ಅವರಿಗೆ 2010 ಜೂನ್ ರಿಂದ 2021 ರ ಸೆಪ್ಟಂಬರ್ ವರೆಗೆ ಶಾರದಾ ಗ್ರೂಪ್ ಸುಮಾರು 65.85 ಲಕ್ಷ ರು. ಹಣವನ್ನು ಲಾಯರ್ ಶುಲ್ಕ ಎಂದು ಪಾವತಿಸಿದೆ ಎಂದು ಹೇಳಿದೆ.
ಆದರೆ ಟಿಡಿಎಸ್ ಫೈಲ್ ಮಾಡುವಾಗ ವಕೀಲೆ ನಳಿನಿ ಅವರಿಗೆ ಶಾರದ ಗ್ರೂಪ್ 1.5 ಕೋಟಿ ರು ಪಾವತಿಸಿದೆ ಎಂದು ತೋರಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ನಳಿನಿ ಚಿದಂಬರಂ ಅವರ ಹೆಸರನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿದ್ದರು.
SCROLL FOR NEXT