ನವದೆಹಲಿ: ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ವಿದ್ಯಾರ್ಥಿನಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ ಈ ಸಂಬಂಧ ಜೆಎನ್ ಯು ಕನ್ಹಯ್ಯ ಕುಮಾರ್ ದಂಡ ವಿಧಿಸಿತ್ತು.
2015ರ ಜೂನ್ 10ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕವಾಗಿ ಮೂತ್ರ ವಿಸರ್ಜಿನೆ ಮಾಡುತ್ತಿದ್ದ ಕನ್ಹಯ್ಯಾ ಕುಮಾರ್ ಅವರನ್ನು ವಿದ್ಯಾರ್ಥಿನಿಯೊಬ್ಬಳು(ಇದೀಗ ಹಳೆ ವಿದ್ಯಾರ್ಥಿನಿ ) ಆಕ್ಷೇಪಿಸಿದ್ದಾಳೆ. ಈ ವೇಳೆ ಉಢಾಫೆತನ ತೋರಿದ ಕನ್ಹಯ್ಯ ಕುಮಾರ ಮೂತ್ರ ವಿಸರ್ಜನೆ ಮುಂದುವರಿಸಿ, 'ಇದು ನನ್ನ ಹಾಸ್ಟೇಲ್ ,ನೀನು ಹುಚ್ಚಿ' ಎಂದು ನಿಂದಿಸಿ 'ನಿನ್ನನ್ನು ನೋಡಿಕೊಳ್ಳುತ್ತೇನೆ .ನನ್ನ ವಿರುದ್ದ ಅದೇನು ಮಾಡುತ್ತೀಯಾ ಮಾಡು' ಎಂದಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಜೆಎನ್‌ಯು ಆಡಳಿತ ಮಂಡಳಿಗೆ ವಿದ್ಯಾರ್ಥಿನಿ ದೂರನ್ನು ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಳು. ಆದರೆ ಕನ್ಹಯ್ಯಾ ಭವಿಷ್ಯದ ದೃಷ್ಟಿಯಿಂದ ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿ ಕೇವಲ 3,000 ರೂಪಾಯಿ ದಂಡ ವಿಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics