ಮೋದಿಯವರಿಗೆ ಉಡುಗೊರೆ ಕೊಡುತ್ತಿರುವ ಸಂದೀಪ್ ಸೋನಿ 
ದೇಶ

ಮರದಲ್ಲಿ ಕೆತ್ತಿದ ಭಗವದ್ಗೀತೆಯನ್ನು ಮೋದಿಗೆ ಉಡುಗೊರೆಯಾಗಿ ಕೊಟ್ಟ ಬಡಗಿ

ಬಡಗಿಯೋರ್ವ 3 ವರ್ಷದಿಂದ ಶ್ರಮವಹಿಸಿ ಕೆತ್ತನೆ ಮಾಡಿದ್ದ ಭಗವದ್ಗೀತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ...

ಕಾನ್ಪುರ: ಬಡಗಿಯೋರ್ವ 3 ವರ್ಷದಿಂದ ಶ್ರಮವಹಿಸಿ ಕೆತ್ತನೆ ಮಾಡಿದ್ದ ಭಗವದ್ಗೀತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಸಂದೀಪ್ ಸೋನಿ (32) ಉಡುಗೊರೆ ಕೊಟ್ಟ ವ್ಯಕ್ತಿಯಾಗಿದ್ದು, ಈತ ಕಳೆದ 3 ವರ್ಷಗಳಿಂದ ಶ್ರಮವಹಿಸಿ ಮರದಲ್ಲೇ ಭಗವದ್ಗೀತೆಯ 18 ಅಧ್ಯಾಯ ಮತ್ತು 706 ಶ್ಲೋಕಗಳನ್ನು ಕೆತ್ತನೆ ಮಾಡಿದ್ದ. ಮರದಲ್ಲಿ ಕೆತ್ತನೆ ಮಾಡಿದ್ದ ಈ ಉಡುಗೊರೆಯನ್ನು ಮೋದಿಯವರಿಗೆ ನೀಡಲು ಹಲವು ಬಾರಿ ಯತ್ನಿಸಿದ್ದಾನೆ. ಆದರೆ ಇದು ಸಾಧ್ಯವಾಗಿರಲಿಲ್ಲ.

ಈ ಬಗ್ಗೆ ಮಾಹಿತಿ ತಿಳಿದ ಪ್ರಧಾನಿಯವರ ಸಚಿವಾಲಯವು ನಂತರ ಮೋದಿಯವರನ್ನು ಭೇಟಿ ಮಾಡುವಂತೆ ಆಹ್ವಾನ ನೀಡಿದೆ. ಇದರಂತೆ ಸೋನಿ ತನ್ನ ತಾಯಿ ಹಾಗೂ ಸ್ನೇಹಿತನೊಂದಿಗೆ ಮೋದಿಯವರನ್ನು ಭೇಟಿ ಮಾಡಿ ಉಡುಗೊರೆಯನ್ನು ನೀಡಿದ್ದಾನೆ.

ಉಡುಗೊರೆ ತೆಗೆದುಕೊಂಡ ಬಳಿಕ ಸೋನಿಗೆ ಸಲಹೆ ನೀಡಿರು ಮೋದಿಯವರು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ಉದ್ದಿಮೆಯನ್ನು ಪ್ರಾರಂಭಿಸುವಂತೆ ತಿಳಿಸಿದ್ದಾರೆ. ಅಲ್ಲದೆ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಇದರಂತೆ ಉಡುಗೊರೆ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಮೋದಿಯವರು, ಮರದಲ್ಲಿ ಕೆತ್ತಿರುವ ಭಗವದ್ಗೀತೆ ಸುಂದರವಾದ ಕಲಾಕೃತಿಯಾಗಿದೆ ಎಂದು ಹೊಗಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT