ದೇಶ

ವಯಸ್ಕರ ಪರಸ್ಪರ ಸಮ್ಮತದ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಮುಂಬೈ ಹೈಕೋರ್ಟ್

Shilpa D

ಮುಂಬಯಿ: ವಯಸ್ಕರಾದ ಹೆಣ್ಣು ಮತ್ತು ಗಂಡು ಪರಸ್ಪರ ಸಹಮತದಿಂದ ಲೈಂಗಿಕ ಸಂಬಂಧ ಬೆಳೆಸಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಮುಂಬೈ ಹೈಕೋರ್ಟ್ ಹೇಳಿದೆ.

ಮಹಾರಾಷ್ಟ್ರದ ಸೋಲಾಪುರ ಯುವಕನಿಗೆ ಜಾಮೀನು ನೀಡುವ ಸಂಬಂಧ ಮುಂಬಯಿ ಹೈಕೋರ್ಟ್ ಈ ವಿಷಯ ತಿಳಿಸಿದೆ. ವಿದ್ಯಾವಂತ ಮಹಿಳೆಗೆ ಸಂಗಾತಿಯೊಂದಿಗೆ ದೈಹಿಕ ಸಂಬಂಧ ಹೊಂದುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವಿರುತ್ತದೆ.  ಹೀಗಾಗಿ ಸಹಮತದ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

ಮುಂಬಯಿಯ ಯುವತಿ ಮತ್ತು ಯುವಕ ಪರಸ್ಪರ ಪ್ರೀತಿಸುತ್ತಿದ್ದು, ನಂತರ ಇಬ್ಬರು ಯುವಕ ವಿವಾಹವಾಗುವ ಭರವಸೆ ನೀಡಿದ ನಂತರ ಆತನೊಂದಿಗೆ ಯುವತಿ ದೈಹಿಕ ಸಂಪರ್ಕ ಹೊಂದಿದ್ದಳು. ಇದಾದ ನಂತರ ಆಕೆ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸುವಂತೆ ಯುವಕ ಒತ್ತಾಯಿಸಿದ್ದ.

ಯುವಕ ತನ್ನನ್ನು ವಿವಾಹವಾಗುವುದಾಗಿ ಹೇಳಿ ವಂಚಿಸಿದ್ದಾನೆಂದು ಆರೋಪಿಸಿ 24 ವರ್ಷದ ಯುವತಿ ಸೋಲಾಪುರದ ಯುವಕನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಯುವಕನಿಗೆ ಜಾಮೀನು ನೀಡಿ, ವಯಸ್ಕರು ಪರಸ್ಪರ ಸಮ್ಮತದ ಮೇರೆಗೆ ಹೊಂದುವ ಲೈಂಗಿಕ ಸಂಪರ್ಕ ಅತ್ಯಾಚಾರವಾಗುವುದಿಲ್ಲ ಎಂದು ಹೇಳಿದೆ.

SCROLL FOR NEXT