ಕಾಂಗ್ರೆಸ್ ಪಕ್ಷದ ಒಟ್ಟು ಆದಾಯ ರು. 1,687 ಕೋಟಿ
ರಾಜಕೀಯ ಪಕ್ಷಗಳು ತಮ್ಮ ಆದಾಯದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅತೀ ಹೆಚ್ಚು ಆದಾಯ ಕಾಂಗ್ರೆಸ್ ಪಕ್ಷಕ್ಕಿದೆ. 2010-11 ರಿಂದ 2013-14ರ...
ಹೈದ್ರಾಬಾದ್: ರಾಜಕೀಯ ಪಕ್ಷಗಳು ತಮ್ಮ ಆದಾಯದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅತೀ ಹೆಚ್ಚು ಆದಾಯ ಕಾಂಗ್ರೆಸ್ ಪಕ್ಷಕ್ಕಿದೆ. 2010-11 ರಿಂದ 2013-14ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಒಟ್ಟು ಆದಾಯ ರು. 1,687. 12 ಕೋಟಿ ಆಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯಲ್ಲಿ ಉಲ್ಲೇಖಿಸಲಾಗಿದೆ.
2014-15ರಲ್ಲಿ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯ (ಬಿಜೆಪಿ, ಐಎನ್‌ಸಿ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಹೊರತು ಪಡಿಸಿ) ಮತ್ತು 2010-11 ರಿಂದ 2014 -15 )ರ ಈ ಐದು ವರುಷಗಳ ಒಟ್ಟು ಆದಾಯ ರು.4, 261. 32 ಕೋಟಿ ಆಗಿದೆ.
ಬಿಜೆಪಿಯ ಒಟ್ಟು ಆದಾಯ ರು. 1,475.44 ಕೋಟಿ ಆಗಿದ್ದು, ಭಾರತದಾದ್ಯಂತವಿರುವ ಕಾಂಗ್ರೆಸ್ ಪಕ್ಷದ ಆದಾಯ ರು.1,687.12 ಕೋಟಿ ಆಗಿದೆ ಎಂದು ಎನ್‌ಜಿಒ ಹೇಳಿದೆ.
ಬಿಜೆಪಿಗೆ ದೇಣಿಗೆ ಮೂಲಕ ರು. 1,297.37 ಕೋಟಿ (ಶೇ. 87.93) ಸಿಕ್ಕಿದರೆ, ಕಾಂಗ್ರೆಸ್‌ಗೆ ರು. 184.408 ಕೋಟಿ (ಶೇ.10.93) ಸಿಕ್ಕಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.