ನವದೆಹಲಿ: 2015ರಲ್ಲಿ ಕರ್ನಾಟಕದಲ್ಲಿ ಪ್ರತಿ ತಿಂಗಳಲ್ಲಿ ಅಂದಾಜು 8 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಆಂಧ್ರಪ್ರದೇಶದಲ್ಲಿ ಒಟ್ಟು 58 ಮತ್ತು ತೆಲಂಗಾಣದಲ್ಲಿ ಒಟ್ಟು 342 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೃಷಿ ಸಚಿವಾಲಯ ವರದಿ ಹೇಳಿದೆ.
ಇನ್ನು 2016 ಫೆಬ್ರವರಿ 18 ರವರೆಗೆ 57 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟು ರೈತರು ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೈತರಿಗೆ ಶೇ.7ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಅದರಲ್ಲಿ ಕೇವಲ ಶೇ.4ರಷ್ಟು ಹಣ ಮಾತ್ರ ಮರು ಪಾವತಿಯಾಗುತ್ತಿತ್ತು. ಇನ್ನುಳಿದ ರೈತರು ಮಾತ್ರ ಬೆಳೆ ನಷ್ಟದಿಂದಾಗಿ ಸಾಲ ತೀರಿಸದೆ ಆತ್ಮಹತ್ಯೆ ಶರಣಾಗುತ್ತಿದ್ದರು ಎಂದು ವರದಿ ತಿಳಿಸಿದೆ.
ರೈತರಿಗೆ ಸಾಲ ನೀಡಬೇಕಾದರ ಸಾಕಷ್ಟು ಷರತ್ತುಗಳನ್ನು ವಿಧಿಸುತ್ತಿದ್ದ ಬ್ಯಾಂಕುಗಳು, ಮಲ್ಯಾಗೆ ಸಾಲ ನೀಡಬೇಕಾದರೆ ಅದೇ ರೀತಿಯ ಷರತ್ತುಗಳನ್ನು ವಿಧಿಸಿಲ್ಲ ಎಂದು ರಾಜ್ಯ ಸರ್ಕಾರಿ ಸ್ವಾಮ್ಯದ ವಸಂತರಾವ್ ನಾಯ್ಕ್ ಶೇತಿ ಸ್ವಾವಲಂಬನ್ ಮಿಷನ್(ವಿಎನ್ ಎಸ್ ಎಸ್ ಎಂ) ಹೇಳಿದೆ.
ಆರ್ ಬಿಐ ವಿಧಿಸಿದ ರೈತ ಸಾಲ, ಗ್ರಾಮೀಣ ಸಾಲಗಳ ಗುರಿ ಸಾಧನೆಯಲ್ಲಿನ ವೈಫಲ್ಯದ ಪರಿಣಾಮವಾಗಿ ರಾಷ್ಟ್ರಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಎನ್ ಎಸ್ ಎಸ್ ಎಂ ದೂರು ನೀಡಿತ್ತು. ಅಷ್ಟೇ ಅಲ್ಲದೇ ಈ ಬಗ್ಗೆ ಪ್ರದಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics