ನನ್ನನ್ನು ಮೋದಿ ಚಮಚಾ ಎಂದು ಕರೆದರೇ, ಅದಕ್ಕಿಂತ ದೊಡ್ಡ ಸೌಭಾಗ್ಯವಿಲ್ಲ: ಅನುಪಮ್ ಖೇರ್
ತಮ್ಮನ್ನು ಮೋದಿ ಅವರ ಚಮಚಾ (ಬಂಟ) ಎಂದು ಕರೆದರೂ ಪರವಾಗಿಲ್ಲ. ಹಾಗಂತ ಕರೆಸಿಕೊಳ್ಳುವುದಕ್ಕಿಂತ ದೊಡ್ಡ ಸೌಭಾಗ್ಯ ಬೇರೆ ಇಲ್ಲ ಎಂದು ನಟ ಅನುಪಮ್...
ನವದೆಹಲಿ: ತಮ್ಮನ್ನು ಮೋದಿ ಅವರ ಚಮಚಾ (ಬಂಟ) ಎಂದು ಕರೆದರೂ ಪರವಾಗಿಲ್ಲ. ಹಾಗಂತ ಕರೆಸಿಕೊಳ್ಳುವುದಕ್ಕಿಂತ ದೊಡ್ಡ ಸೌಭಾಗ್ಯ ಬೇರೆ ಇಲ್ಲ ಎಂದು ನಟ ಅನುಪಮ್ ಖೇರ್ ಹೇಳಿದ್ದಾರೆ.
ಖಾಸಗಿ ಟಿವಿ ಚಾನೆಲ್ ವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅನುಪಮ್ ಖೇರ್ ಇದೇ ಮೊದಲ ಬಾರಿಗೆ ತಾವು ಮೋದಿ ಅವರ ಪರಮ ಅಭಿಮಾನಿ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮೋದಿ ಅವರ ಚಮಚಾ ಎಂದು ಕರೆಸಿಕೊಳ್ಳಲು ನನಗೇನೂ ಅವಮಾನವಿಲ್ಲ. ಚಮ್ಚಾ ಎನ್ನುವ ಪದ ಸರಿ ಎನ್ನಿಸಿದರೆ ಹಾಗೇ ಕರೆಯಿರಿ,' ಎಂದು ಖೇರ್ ಹೇಳಿದರು.
ನಾವು ಸಣ್ಣ ಮಕ್ಕಳಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪರ ಘೋಷಣೆ ಕೂಗುತ್ತಿದ್ದೆವು. ಶಾಲೆಗಳಲ್ಲಿ ಮೋದಿ ಅವರಿಗೆ ಮಕ್ಕಳು ಜೈಕಾರ ಹಾಕಬೇಕೆಂದೂ ಅವರು ಅಭಿಪ್ರಾಯಪಟ್ಟರು. ಮೋದಿ ಅವರಿಗೆ ಜೈಕಾರ ಹಾಕುವುದರಲ್ಲಿ ಏನು ತಪ್ಪಿದೆ?,' ಎಂದು ಅವರು ಪ್ರಶ್ನಿಸಿದ್ದಾರೆ.
ಮಹಿಳೆಯರ ಶೌಚಾಲಯದ ಬಗ್ಗೆ ಮೊದಲ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ. ದೇಶ ಪ್ರೇಮದ ಬಗ್ಗೆ ನನ್ನಲ್ಲಿ ಭಾವುಕತೆ ಹುಟ್ಟುವಂತೆ ಮಾಡಿದ್ದು ಅವರೇ ಎಂದು ಖೇರ್ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.