ನವದೆಹಲಿ: ತಮ್ಮ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಯುವಕನ ಜತೆ ಹಾಸಿಗೆ ಹಂಚಿಕೊಂಡಿದ್ದ ಮಗಳನ್ನು ಕಂಡು ರೊಚ್ಚಿಗೆದ್ದ ತಾಯಿ ಮಗಳನ್ನು ಹತ್ಯೆ ಮಾಡಿದ ಘಟನೆ ದೆಹಲಿಯ ಸೀಲಾಂಪುರ್ ನಲ್ಲಿ ನಡೆದಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆಗೆ ಬಂದಾಗ 20 ರ ಹರೆಯದ ಮಗಳು ಒಬ್ಬ ಯುವಕನ ಜತೆ ಹಾಸಿಗೆ ಹಂಚಿಕೊಂಡಿದ್ದನ್ನು ತಾಯಿ ನೋಡಿದ್ದಾಳೆ. ತಕ್ಷಣವೇ ಆ ಯುವಕ ಅಲ್ಲಿಂದ ಪರಾರಿಯಾಗಿದ್ದು, ಮಗಳ ಅನುಚಿತ ವರ್ತನೆಯಿಂದ ಸಿಟ್ಟಿಗೆದ್ದ ತಾಯಿ ತಲೆದಿಂಬು ಬಳಸಿ ಉಸಿರುಗಟ್ಟಿಸಿ ಮಗಳ ಹತ್ಯೆಗೈದಿದ್ದಾಳೆ. ಯುವತಿಯ ಮದುವೆ ಮರು ದಿನ ನಡೆಯಬೇಕಾಗಿದ್ದು, ಮನೆಯಲ್ಲಿ ಅತಿಥಿಗಳು ಜಮಾಯಿಸಿದ್ದರು.
ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಿ ಯುವತಿಯನ್ನು ಲೋಕ ನಾಯಕ್ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.
ಮಗಳನ್ನು ಉಸಿರುಗಟ್ಟಿಸಿ ಹತ್ಯೆಗೈದ ನಂತರ ಆ ಅಮ್ಮ ಮಗನಲ್ಲಿ ಈ ವಿಷಯವನ್ನೆಲ್ಲಾ ಹೇಳಿಕೊಂಡಿದ್ದಾರೆ. ಅದೇ ವೇಳೆ ಅಲ್ಲಿ ನೆರೆದಿದ್ದ ಅತಿಥಿಗಳಲ್ಲಿ ಮಗಳಿಗೆ ಹೃದಯಾಘಾತವಾಗಿದೆ, ಆದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿ ಆಸ್ಪತ್ರೆಗೆ ಕರೆ ತಂದಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಹತ್ಯೆಗೀಡಾದ ಯುವತಿಯ ಅಮ್ಮ ಮತ್ತು ಸಹೋದರನ ವಿರುದ್ಧ ಕೇಸು ದಾಖಲಿಸಲಾಗಿದೆ.
ಹತ್ಯೆಗೀಡಾದ ಯುವತಿಯ ವಿವಾಹವು ಗಾಜಿಯಾಬಾದ್ ಮೂಲದ ಉದ್ಯಮಿಯೊಂದಿಗೆ ನಿಶ್ಚಯವಾಗಿದ್ದು, ಈ ಯುವತಿ ಬಾಡಿಗೆ ಮನೆಯ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics