ವಿಜಯ್ ಮಲ್ಯ (ಸಂಗ್ರಹ ಚಿತ್ರ) 
ದೇಶ

ಮಲ್ಯ ವಿವಾದ ಸಂಸತ್ತಿನಲ್ಲಿ ಗದ್ದಲ: ಕೇಂದ್ರಕ್ಕೆ ಕಾಂಗ್ರೆಸ್ ನಿಂದ ಪಂಚ ಪ್ರಶ್ನೆ

ಸಾಲದ ಸುಳಿಯಲ್ಲಿ ಸಿಲುಕಿ ವಿದೇಶಕ್ಕೆ ಹಾರಿದ್ದ ಮದ್ಯದ ದೊರೆ ವಿಜಯ್ ಮಲ್ಯ ಅವರ ವಿವಾದ ಇದೀಗ ಸಂಸತ್ತಿನಲ್ಲಿ ಗದ್ದಲವನ್ನುಂಟು ಮಾಡಿದ್ದು, ವಿವಾದ ಕುರಿತಂತೆ...

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿ ವಿದೇಶಕ್ಕೆ ಹಾರಿದ್ದ ಮದ್ಯದ ದೊರೆ ವಿಜಯ್ ಮಲ್ಯ ಅವರ ವಿವಾದ ಇದೀಗ ಸಂಸತ್ತಿನಲ್ಲಿ ಗದ್ದಲವನ್ನುಂಟು ಮಾಡಿದ್ದು, ವಿವಾದ ಕುರಿತಂತೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಲ್ಯ ವಿವಾದ ಕುರಿತಂತೆ ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರು ಪಂಚ ಪ್ರಶ್ನೆಗಳನ್ನು ಹಾಕಿದ್ದಾರೆ. ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ಕಪ್ಪುಹಣವನ್ನು ದೇಶಕ್ಕೆ ಮರಳಿ ತರುವ ಬದಲು ಕೇಂದ್ರ ಸರ್ಕಾರ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿಯವರನ್ನೇ ದೇಶ ಬಿಟ್ಟು ಹೋಗಲು ದಾರಿ ಮಾಡಿಕೊಟ್ಟಿದೆ ಎಂದು ಆರೋಪಿಸಿದರು. ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಮಲ್ಯ ವಿವಾದಕ್ಕೆ ಸಂಬಂಧಿಸಿ ಉತ್ತರ ನೀಡುವಂತೆ 5 ಪ್ರಶ್ನೆಗಳನ್ನು ಹಾಕಿದ್ದಾರೆ.

  • ರು.9000 ಕೋಟಿ ಸಾರ್ವಜನಿಕ ಹಣವನ್ನು ಹಿಂಪಡೆಯಲು ಸರ್ಕಾರ ವಿದೇಶಕ್ಕೆ ಹಾರಿಲುವ ಮಲ್ಯ ಅವರನ್ನು ವಶಕ್ಕೆ ಪಡೆಯುವ ಸಲುವಾಗಿ ಕೇಂದ್ರ ಸರ್ಕಾರ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹೇರುವುದೇ?
  • ಮಲ್ಯ ವಿದೇಶಕ್ಕೆ ಹಾರುವುದಕ್ಕೂ ಮುನ್ನ ಮಾರ್ಚ್ 1 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದರು. ಈ ವಿಚಾರವನ್ನು ಜೇಟ್ಲಿ ಅವರು ಪ್ರಧಾನಿ ಮೋದಿಯವರಿಗೆ ತಿಳಿಸಿದ್ದಾರೆಯೇ? ಅಥವಾ ಸರ್ಕಾರ ಈ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದೆಯೇ?
  • ವಿಜಯ್ ಮಲ್ಯ ಅವರನ್ನು ಬಂಧನಕ್ಕೊಳಪಡಿಸುವಂತೆ ಸಿಬಿಐ ಅಧಿಕಾರಿಗಳು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಇದರ ಹಿಂದಿನ ಉದ್ದೇಶವೇನಿತ್ತು?
  • ಜಾರಿ ನಿರ್ದೇಶನಾಲಯವು ಮಾರ್ಚ್ ಅಂತ್ಯದೊಳಗೆ ಹಾಜರಾಗುವಂತೆ ಮಲ್ಯ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಹೈದರಾಬಾದ್ ನ್ಯಾಯಾಲಯ ಕೂಡ ಜಾಮೀನು ರಹಿತ ಬಂಧನ ವಾರೆಂಟ್ ನ್ನು ಜಾರಿ ಮಾಡಿತ್ತು. ವಿಜಯ್ ಮಲ್ಯ ಅವರು ಈಗಾಗಲೇ ದೇಶ ಬಿಟ್ಟು ವಿದೇಶಕ್ಕೆ ಹಾರಿದ್ದಾರೆ. ಯಾವಾಗ ಬರುತ್ತಾರೆಂಬುದರ ಬಗ್ಗೆ ಯಾರಿಗೂ ಮಾಹಿತಿಯಿಲ್ಲ ಎಂದಾದಲೇ ಮೇಲೆ ಈ ನೋಟಿಸ್ ಗಳು ಕಣ್ಣಿಗೆ ಮಣ್ಣೆರೆಚುವ ಕೆಲಸವೇ?
  • ಯುನೈಟೆಡ್ ಸ್ಪಿರಿಟ್ಸ್ ನ್ನು ಪ್ರಸ್ತುತ ನಿಯಂತ್ರಿಸುತ್ತಿರುವುದು ಡಿಯಾಜಿಯೋ. ವಿಜಯ್ ಮಲ್ಯ ಅವರೊಂದಿಗೆ ಮಾಡಿಕೊಂಡಿದ್ದ ರು.515 ಕೋಟಿ ಒಪ್ಪಂದದಲ್ಲಿ ಕಂಪನಿ ಈಗಾಗಲೇ ಶೇ.75 ಹಣವನ್ನು ಮಲ್ಯ ಅವರಿಗೆ ನೀಡಿದೆ. ಮಲ್ಯ ಅವರಿಂದ ಮೋದಿ ಸರ್ಕಾರ ಹೇಗೆ ಹಣವನ್ನು ವಸೂಲಿ ಮಾಡಲಿದೆ? ಎಂದು ಪ್ರಶ್ನೆ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!