ಅರುಣ್ ಜೇಟ್ಲಿ 
ದೇಶ

ನೀವು ಟೀಕಿಸಿದರೆ ಅದು ವಾಕ್ ಸ್ವಾತಂತ್ರ್ಯ, ನಾವು ಟೀಕಿಸಿದರೆ ಅಸಹಿಷ್ಣುತೆ: ಯೆಚೂರಿಗೆ ಅರುಣ್ ಜೇಟ್ಲಿ ತರಾಟೆ

ರಾಜ್ಯಸಭೆಯಲ್ಲಿ ಆಧಾರ್ ಮಸೂದೆ ಮೇಲಿನ ಚರ್ಚೆ ಸಹಿಷ್ಣುತೆ ಹಾಗೂ ವಾಕ್ ಸ್ವಾತಂತ್ರ್ಯ ವಿಷಯಗಳ ಪ್ರಸ್ತಾಪಕ್ಕೂ ಸಾಕ್ಷಿಯಾಯಿತು.

ನವದೆಹಲಿ: ರಾಜ್ಯಸಭೆಯಲ್ಲಿ ಆಧಾರ್ ಮಸೂದೆ ಮೇಲಿನ ಚರ್ಚೆ ಅಸಹಿಷ್ಣುತೆ ಹಾಗೂ ವಾಕ್ ಸ್ವಾತಂತ್ರ್ಯ ವಿಷಯಗಳ ಪ್ರಸ್ತಾಪಕ್ಕೂ ಸಾಕ್ಷಿಯಾಯಿತು.

ಆಧಾರ್ ಮಸೂದೆ ಬಗ್ಗೆ ಮಾತನಾಡುತ್ತಿದ್ದ ಸಚಿವ ಅರುಣ್ ಜೇಟ್ಲಿ, ಸಿಪಿಐ(ಎಂ) ಪಕ್ಷದ ಮುಖಂಡ ಸೀತಾರಾಮ್ ಯೆಚೂರಿ ಅವರನ್ನು ಟೀಕಿಸಿದ್ದು, ನೀವು ನನ್ನನ್ನು ಟೀಕಿಸಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯವಾಗುತ್ತದೆ. ಆದರೆ ನಾನು ನಿಮ್ಮನ್ನು ಟೀಕಿಸಿದರೆ ಅದು ನನ್ನ ಅಸಹಿಷ್ಣುತೆ ಆಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿವೆ. ಈಗ ಅಸಹಿಷ್ಣುತೆ ವಿಷಯವನ್ನು ಪ್ರಸ್ತಾಪಿಸಿರುವ ಅರುಣ್ ಜೇಟ್ಲಿ ವಿಪಕ್ಷಗ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಅಸಹಿಷ್ಣುತೆ ಖಂಡಿಸಿ ಪ್ರಶಸ್ತಿ ವಾಪಸಾತಿ ಚಳುವಳಿಯನ್ನು ಅರುಣ್ ಜೇಟ್ಲಿ ಪೂರ್ವ ಯೋಜಿತವೆಂದು ಆರೋಪಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ