ಉತ್ತರಪ್ರದೇಶ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಹಿಳಾ ಶಾಸಕಿಯೊಬ್ಬರು ಸಾರ್ವಜನಿಕವಾಗಿ ಬೈದು ಬುದ್ದಿಹೇಳಿದ ಘಟನೆ ವರದಿಯಾಗಿದೆ.
ಸಂಬಾಲ್‌ನ ಸಮಾಜವಾದಿ ಪಕ್ಷದ ಶಾಸಕಿ ಲಕ್ಷ್ಮಿ ಗೌತಮ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಾರ್ವಜನಿಕವಾಗಿ ಬೈದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ದೂರು ನೀಡಲು ಬಂದ ಮಹಿಳೆಯ ದೂರು ಸ್ವೀಕರಿಸದೆ ಆಕೆಯೊಂದಿಗೆ ಪೊಲೀಸ್ ಅಧಿಕಾರಿ ಅನುಚಿತವಾಗಿ ವರ್ತಿಸಿದ್ದರು. ಇದಕ್ಕೆ ಕೋಪಗೊಂಡ ಶಾಸಕಿ ಒಬ್ಬರು ನಿಮ್ಮನ್ನು ಸಮೀಪಿಸಿದಾಗ ಅವರೊಂದಿಗೆ ಸಭ್ಯರೀತಿಯಲ್ಲಿ ವರ್ತಿಸಬೇಕು ಎಂದು ಎಲ್ಲರ ಮುಂದೆ ಪೊಲೀಸ್ ಅಧಿಕಾರಿಗೆ ಬೈದು ಬುದ್ಧಿವಾದ ಹೇಳಿದ್ದಾರೆ.