ಸಾಂದರ್ಭಿಕ ಚಿತ್ರ 
ದೇಶ

ತಾರಕಕ್ಕೇರಿದ ಸಟ್ಲೆಜ್-ಯಮುನಾ ಕಾಲುವೆ ವಿವಾದ: ಪಂಜಾಬ್ ಸರ್ಕಾರದಿಂದ ನಿರ್ಣಯ ಅಂಗೀಕಾರ

ಸಟ್ಲೆಜ್-ಯಮುನಾ ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣದ ವಿರುದ್ಧ ಪಂಜಾಬ್ ಸರ್ಕಾರ ಅವಿರೋಧವಾಗಿ ನಿರ್ಣಯ...

ಚಂಡೀಗಢ: ಸಟ್ಲೆಜ್-ಯಮುನಾ ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣದ ವಿರುದ್ಧ ಪಂಜಾಬ್ ಸರ್ಕಾರ ಅವಿರೋಧವಾಗಿ ನಿರ್ಣಯ ಅಂಗೀಕರಿಸಿರುವುದು ಈಗ ತೀವ್ರ ಕೋಲಾಹಲ, ವಿವಾದಕ್ಕೆ ಕಾರಣವಾಗಿದೆ.

ಹರ್ಯಾಣ ರಾಜ್ಯಕ್ಕೆ ಹಂಚಿಕೆ ಮಾಡಲು ರಾಜ್ಯದಲ್ಲಿ ಸಾಕಷ್ಟು ನೀರು ಇಲ್ಲ ಎಂದು ಪಂಜಾಬ್ ಹೇಳಿದೆ. ಪಂಜಾಬ್ ನ ಈ ನಿರ್ಣಯದ ವಿರುದ್ಧ ಹರ್ಯಾಣ ಸರ್ಕಾರ ಕೇಂದ್ರ ಮತ್ತು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

ಸಟ್ಲೆಜ್-ಯಮುನಾ ಜೋಡಣೆ ವಿಷಯದಲ್ಲಿ ಯಥಾಸ್ಥಿತಿ ಕಾಯ್ದು ಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ ದಿನ ಕಳೆಯುವುದರೊಳಗೆ ಈ ಬೆಳವಣಿಗೆ ನಡೆದಿದೆ. ಪಂಜಾಬ್ ವಿಧಾನಸಭೆಯ ನಾಯಕರಾಗಿರುವ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ನಿರ್ಣಯವನ್ನು ಅಂಗೀಕರಿಸಿ ತಮ್ಮ ರಾಜ್ಯವೇ ತೀವ್ರ ಬರಗಾಲ ಎದುರಿಸುತ್ತಿರುವಾಗ ಬೇರೆ ರಾಜ್ಯಕ್ಕೆ ಹಂಚಿಕೆ ಮಾಡಲು ನೀರೆಲ್ಲಿದೆ? ಹಾಗಾಗಿ ಸಟ್ಲೆಜ್-ಯಮುನಾ ನದಿಗಳ ಜೋಡಣೆಗೆ ಕಾಲುವೆ ನಿರ್ಮಿಸುವ ಅಗತ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕಾಲುವೆ ನಿರ್ಮಿಸದಂತೆ ಪಂಜಾಬ್ ಸದನದ ಎಲ್ಲಾ ಪಕ್ಷಗಳ ಸದಸ್ಯರು ಅವಿರೋಧವಾಗಿ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು.

ವಿಧಾನಸಭೆಯ ಪ್ರತಿಪಕ್ಷ ನಾಯಕ ಕಾಂಗ್ರೆಸ್ ನ ಚರಂಜಿತ್ ಚನ್ನಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮದನ್ ಮೋಹನ್ ಮಿತ್ತಲ್ ಕೂಡ ಮುಖ್ಯಮಂತ್ರಿಯ ಅಭಿಪ್ರಾಯಕ್ಕೆ ಅನುಮೋದನೆ ಸೂಚಿಸಿದರು.

ಚನ್ನಿ ಮಾತನಾಡಿ, ಪಂಜಾಬ್ ರಾಜ್ಯದ ಜನತೆಯ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷ ಎಂದಿಗೂ ಬದ್ಧವಾಗಿದೆ. ಈ ವಿಷಯದಲ್ಲಿ ನಾವು ಸರ್ಕಾರಕ್ಕೆ ಬೆಂಬಲ ಸೂಚಿಸುತ್ತೇವೆ ಎಂದರು. ಬಿಜೆಪಿ ನಾಯಕ ಮಿತ್ತಲ್ ಮಾತನಾಡಿ, ರಾಜ್ಯವು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಸಟ್ಲೆಜ್-ಯಮುನಾ ಕಾಲುವೆಯನ್ನು ನಿರ್ಮಿಸುವ ಅಗತ್ಯವಿಲ್ಲ ಎಂದರು.

ಆದರೆ ಹರ್ಯಾಣ ಸರ್ಕಾರ ಪಂಜಾಬ್ ಸರ್ಕಾರದ ನಿರ್ಣಯದ ವಿರುದ್ಧ ತೀವ್ರವಾಗಿ ಹರಿಹಾಯ್ದಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಕೂಡ ಪಂಜಾಬ್ ಸರ್ಕಾರ ನಿರ್ಣಯವನ್ನು ಅಂಗೀಕರಿಸಿರುವುದು ಕಾನೂನಿನ ಎಲ್ಲಾ ಚೌಕಟ್ಟನ್ನು ಮೀರಿದೆ ಎಂದು ಆಪಾದಿಸಿದೆ.

''ನಮಗೆ ಈ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ. ಈ ವಿಷಯವನ್ನು ಕೂಡಲೇ ಕೇಂದ್ರ ಹಾಗೂ ಸುಪ್ರೀಂ ಕೋರ್ಟ್ ಗಮನಕ್ಕೆ ತರುತ್ತೇವೆ.'' ಎಂದು ಹರ್ಯಾಣ ಸರ್ಕಾರದ ಕೃಷಿ ಸಚಿವ ಒ.ಪಿ.ಧನ್ ಕರ್ ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಕಾಲುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಈ ಬಗ್ಗೆ ಅವರಿಗೆ ಪತ್ರ ಬರೆದಿರುವ ಸಚಿವ ದನ್ ಕರ್ ದೆಹಲಿಯ ಪಾಲಿನ ನೀರನ್ನು ಹರ್ಯಾಣದಿಂದ ಬಿಡಲು ಸಾಧ್ಯವಿಲ್ಲ. ನೀವು ಹರ್ಯಾಣ ಜನತೆ ಮತ್ತು ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಿಂತಿದ್ದೀರಿ. ದೆಹಲಿಯ ಪಾಲಿನ ನೀರನ್ನು ಪಡೆಯಲು ನಿಮ್ಮದೇ ಪ್ರಯತ್ನದಲ್ಲಿ ಕಾಲುವೆ ನಿರ್ಮಿಸಿಕೊಳ್ಳಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ