ದೇಶ

ದೇಶದಲ್ಲೇ ಅತಿ ಹೆಚ್ಚು ಏಡ್ಸ್ ಪೀಡಿತರು ಹೊಂದಿರುವ ರಾಜ್ಯ ಆಂಧ್ರ, ಅತಿ ಕಡಿಮೆ ಕೇರಳ

Mainashree
ನವದೆಹಲಿ: ಭಾರತದಲ್ಲಿ ಒಟ್ಟು 21.17 ಲಕ್ಷ ಜನ ಎಚ್ ಐವಿ ಅಥವಾ ಏಡ್ಸ್ ರೋಗದಿಂದ ಬಳಲುತ್ತಿದ್ದು, ಆಂಧ್ರ ಪ್ರದೇಶಲ್ಲೇ ಅತಿ ಹೆಚ್ಚು ಏಡ್ಸ್ ಸೋಂಕಿತರಿದ್ದಾರೆ ಎಂದು ವರದಿಯಾಗಿದೆ. 
ಆಂಧ್ರಪ್ರದೇಶದಲ್ಲಿ ಒಟ್ಟು 3,94,661 ಮಂದಿ ಎಚ್ ಐವಿ ಸೋಂಕಿಗೆ ಗುರಿಯಾಗಿದ್ದು, ದೇಶದಲ್ಲಿ ಅತಿ ಹೆಚ್ಚು ಏಡ್ಸ್ ಪೀಡಿತರೊಂದಿರುವ ರಾಜ್ಯವಾಗಿದೆ. ಇನ್ನು ಮಾಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. 
ಆಂಧ್ರಪ್ರದೇಶದಲ್ಲಿ 3.94,661, ಮಹಾರಾಷ್ಟ್ರದಲ್ಲಿ 3,01,453, 1,42,982ರಷ್ಟು ಜನರು ಎಚ್ ಐವಿ ಸೋಂಕಿಗೆ ಗುರಿಯಾಗಿದ್ದಾರೆ. ಆದರೆ, ಕೇರಳದಲ್ಲಿ ಮಾತ್ರ 23, 376 ಮಂದಿ ಏಡ್ಸ್ ಪೀಡಿತರಿದ್ದು, ಅತಿ ಕಡಿಮೆ ಏಡ್ಸ್ ಪೀಡಿತರೊಂದಿರುವ ರಾಜ್ಯವಾಗಿದೆ. 
ದೇಶದಲ್ಲಿ 21,17 ಎಚ್ ಐವಿ ಸೋಂಕಿತರ ಪೈಕಿ, ಕೇವಲ 9.25 ಏಡ್ಸ್ ಪೀಡಿತರಿಗೆ ಆಂಟಿರೆಟ್ರೋವೈರಲ್ ತೆರಪಿ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
ಆಂಟಿರೆಟ್ರೋವೈರಲ್ ತೆರಪಿ ಎಂಬ ಔಷಧಿಯನ್ನು ಏಡ್ಸ್ ಪೀಡಿತರಿಗೆ ನೀಡಲಾಗುತ್ತದೆ. ಇದು ವೈರಸ್ ಅಥವಾ ರೋಗವನ್ನು ಗುಣಪಡಿಸುವುದಿಲ್ಲ. ಆದರೆ, ಈ ವೈರಸ್ ಬೆಳೆಯದಂತೆ ತಡೆಹಿಡಿಯುತ್ತದೆ. ಈ ಹಿನ್ನಲೆಯಲ್ಲಿ ಏಡ್ಸ್ ಪೀಡಿತರಿಗೆ ಈ ಔಷಧಿಯನ್ನು ನೀಡಲಾಗುತ್ತದೆ.
SCROLL FOR NEXT