ದೇಶ

ಸ್ವಾತಂತ್ರ್ಯ ನಂತರ ಹಿಂದೂಗಳು ಜಾತ್ಯಾತೀತರಾಗಲು ನಿರ್ಧರಿಸಿದ್ದರು: ಸುಬ್ರಮಣಿಯನ್ ಸ್ವಾಮಿ

Shilpa D

ನವದೆಹಲಿ: ಸ್ವಾತಂತ್ರ್ಯ ನಂತರ ಭಾರತದಲ್ಲಿ ಹಿಂದೂಗಳು ಜಾತ್ಯಾತೀತರಾಗಲು ನಿರ್ಧರಿಸಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಈ ಸಂಬಂಧ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಸ್ವಾಮಿ, 1947 ರಲ್ಲಿ ಭಾರತಕ್ಕೆ ಸ್ವತಂತ್ರ್ಯ ದೊರಕಿದ ನಂತರ ಹಿಂದೂಗಳು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದರು. ಆಗ ಹಿಂದೂಗಳೆಲ್ಲಾ ಜಾತ್ಯಾತೀತರಾಗಲು ತೀರ್ಮಾನ ಕೈಗೊಂಡರು ಎಂದು ಹೇಳಿದ್ದಾರೆ.

ಆಡಳಿತ ನಡೆಸುತ್ತಿದ್ದ ಬ್ರಿಟಿಷರು ಭಾರತವನ್ನು ಹಿಂದೂ ಇಂಡಿಯಾ, ಮುಸ್ಲಿಂ ಪಾಕಿಸ್ತಾನ ಮತ್ತು 600 ರಾಜ್ಯಗಳು ಎಂದು ವಿಭಜಿಸಿದ್ದರು. ಸ್ವತಂತ್ರ್ಯ ಭಾರತದ ಹಿಂದೂಗಳು ಜಾತ್ಯಾತೀತರಾಗಿ ಒಟ್ಟಿಗೆ ಬಾಳಲು ನಿರ್ಧರಿಸಿದರು ಎಂದು ಸ್ವಾಮಿ ಟ್ವಿಟರ್ ನಲ್ಲಿ ಬರೆದಿದ್ದಾರೆ.

SCROLL FOR NEXT