ಸಾಂದರ್ಭಿಕ ಚಿತ್ರ 
ದೇಶ

ಇನ್ನೂ ಹಸಿವಿನಿಂದ ನರಳುತ್ತಿರುವ ಶೇಕಡಾ 15ರಷ್ಟು ಭಾರತೀಯರು

ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆದರೂ ನಮ್ಮ ದೇಶದಲ್ಲಿ ಬಡತನ ನಿರ್ಮೂಲನೆ ಎಂಬುದು ಕೇವಲ ರಾಜಕೀಯ ಪಕ್ಷಗಳ ಭರವಸೆಯ ಮಾತಾಗಿಯೇ...

ನವದೆಹಲಿ: ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆದರೂ ನಮ್ಮ ದೇಶದಲ್ಲಿ ಬಡತನ ನಿರ್ಮೂಲನೆ ಎಂಬುದು ಕೇವಲ ರಾಜಕೀಯ ಪಕ್ಷಗಳ ಭರವಸೆಯ ಮಾತಾಗಿಯೇ ಉಳಿದಿದೆ. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟು ಮಂದಿ ದಿನದ ಕೊನೆಗೆ ಹಸಿವಿನಿಂದಲೇ ಮಲಗಬೇಕಾದ ಪರಿಸ್ಥಿತಿಯಿದೆ.

ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಏಳು ಪ್ರಮುಖ ಯೋಜನೆಗಳ ಮೂಲಕ ಈ ಹಿಂದಿನ ಸರ್ಕಾರಗಳು 2 ಲಕ್ಷದ 13 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದವು. ಯೋಜನಾ ಆಯೋಗದ ಮಾಹಿತಿ ಪ್ರಕಾರ ನಮ್ಮ ದೇಶದ ಗ್ರಾಮೀಣ ಭಾಗದಲ್ಲಿ ಶೇಕಡಾ 25.7ರಷ್ಟು ಮಂದಿ ಬಡವರಿದ್ದರೆ ನಗರ ಪ್ರದೇಶಗಳಲ್ಲಿ ಶೇಕಡಾ 13.7ರಷ್ಟಿದ್ದಾರೆ. ಬಡವರನ್ನು ಮೇಲೆತ್ತಬೇಕಾದ ಆಡಳಿತ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರಿಗಾಗಿ ಇರುವ ಅನೇಕ ಯೋಜನೆಗಳ ಉಪಯೋಗ ಸರಿಯಾಗಿ ಆಗುತ್ತಿಲ್ಲ.

ಸರ್ಕಾರ ಕೋಟ್ಯಂತರ ರೂಪಾಯಿ ಮೀಸಲನ್ನು ವಿವಿಧ ಯೋಜನೆಗಳಿಗೆ ಬಜೆಟ್ ನಲ್ಲಿ ತೋರಿಸುತ್ತದೆ. ಆದರೆ ಅದರ ವಿನಿಯೋಗ ಸರಿಯಾಗಿ ಆಗುತ್ತಿಲ್ಲ.
 
ಬಡತನ ನಿವಾರಣೆ ಯೋಜನೆಗಳಾದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ನಿಯೋಗ ಸಾಮಾಜಿಕ ಗುರಿಯಾದ ಸ್ವಸಹಾಯ ಗುಂಪಿಗೆ ಕೇವಲ ಅರ್ಧ ಭಾಗದಷ್ಟು ತಲುಪುತ್ತದೆ. ಸ್ವಸಹಾಯ ಗುಂಪುಗಳ ಉದ್ದೇಶವೇ ಬಡಜನರನ್ನು ಒಂದುಗೂಡಿಸಿ ಸ್ವ ಉದ್ಯೋಗ ಮಾಡಿ ಅವರ ಜೀವನದ ಮಟ್ಟ ಸುಧಾರಿಸುವುದಾಗಿದೆ.

ಸರ್ಕಾರದ ದಾಖಲೆಗಳ ಪ್ರಕಾರ 2013-14ರಲ್ಲಿ ಸ್ವಸಹಾಯ ಗುಂಪುಗಳ ಗುರಿ 3 ಲಕ್ಷದ 13 ಸಾವಿರದ 427 ಆಗಿತ್ತು. ಆದರೆ ಸಾಧನೆ ಮಾಡಿದ್ದು ಕೇವಲ 1 ಲಕ್ಷದ 94 ಸಾವಿರದ 162. 2014-15ರಲ್ಲಿ ಗುರಿಯು 2 ಲಕ್ಷದ 79 ಸಾವಿರದ 707 ಆಗಿತ್ತು, ಆದರೆ ಸಾಧಿಸಿದ್ದು ಕೇವಲ 1 ಲಕ್ಷದ 87 ಸಾವಿರದ 076. 2014-15ರಲ್ಲಿ ಸ್ವಸಹಾಯ ಗುಂಪುಗಳಿಗೆ ಸಮುದಾಯ ಹೂಡಿಕೆಯ ಗುರಿ 75 ಸಾವಿರದ 814 ಆಗಿತ್ತು. ಆದರೆ ಸಾಧನೆ ಮಾಡಿದ್ದು ಕೇವಲ 48 ಸಾವಿರದ 920.

ಬಡವರಿಗೆ ಕೌಶಲ್ಯ ತರಬೇತಿ ನೀಡುವ ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಯೋಜನೆ ಪ್ರಗತಿಯಲ್ಲಿ ಹಿಂದೆ ಉಳಿದಿದೆ. ಈ ಯೋಜನೆಗೆ ನರೇಂದ್ರ ಮೋದಿ ಸರ್ಕಾರ ಚುರುಕು ನೀಡಿತ್ತು. ಸರ್ಕಾರದ ದಾಖಲೆಗಳ ಪ್ರಕಾರ, 2014-15ರಲ್ಲಿ 5 ಲಕ್ಷ ಬಡವರಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆ ಇತ್ತಾದರೂ ಇದುವರೆಗೆ ಸೌಲಭ್ಯ ಪಡಕೊಂಡವರು 1 ಲಕ್ಷದ 82 ಸಾವಿರದ 037 ಮಂದಿ. ಮೋದಿ ಸರ್ಕಾರ ಕಳೆದ ಯುಪಿಎ ಸರ್ಕಾರಕ್ಕಿಂತ ವೈಯಕ್ತಿಕ ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಸಾಧನೆ ತೋರಿದೆ. 2015-16ರಲ್ಲಿ ಕೇಂದ್ರ ಸರ್ಕಾರ ನಿಗದಿತ ಗುರಿಯ 30 ಸಾವಿರಕ್ಕಿಂತ ಮೀರಿ 39 ಸಾವಿರದ 851 ಸೂಕ್ಷ್ಮ ಉದ್ಯಮ ಘಟಕಗಳನ್ನು ಸ್ಥಾಪಿಸಿದೆ.

ಇಂದಿರಾ ಆವಾಸ್ ಯೋಜನೆಯ ಸಾಧನೆ ಮರೀಚಿಕೆಯಾಗಿ ಉಳಿದಿದೆ. ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಶೇಕಡಾ 60ರಷ್ಟು ಪ್ರಗತಿ ಹೊಂದಿದ್ದರೆ 2015-16ರಲ್ಲಿ ಮೋದಿ ಸರ್ಕಾರದಲ್ಲಿ ಇದು ಕೇವಲ ಶೇಕಡಾ 30ರಷ್ಟಾಗಿದೆ. ಒಡಿಶಾ ರಾಜ್ಯದಲ್ಲಿ ಮಾತ್ರ ನಿಗದಿತ ಗುರಿಗಿಂತ ಹೆಚ್ಚು ಮನೆಗಳನ್ನು ಬಡವರಿಗಾಗಿ ನಿರ್ಮಿಸಲಾಗಿದ್ದು, ಇಲ್ಲಿ 1 ಲಕ್ಷದ 35 ಸಾವಿರದ 403 ಗುರಿಗಿಂತ 1 ಲಕ್ಷದ 76 ಸಾವಿರದ 190 ಮನೆಗಳನ್ನು ನಿರ್ಮಾಣ ಮಾಡಲಾಗಿದೆ.
ಉತ್ತಮ ಆಡಳಿತ ಹೊಂದಿರುವ ದೇಶಕ್ಕೆ ಬಡತನ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದರು ಚೀನಾದ ರಾಜಕೀಯ ವ್ಯಕ್ತಿ ಮತ್ತು ತತ್ವಜ್ಞಾನಿ ಕನ್ಫ್ಯೂಷಿಯಸ್ 520 ಕ್ರಿಸ್ತ ಪೂರ್ವದಲ್ಲಿ.

ಇವರ ಮಾತು ಭಾರತದ ಪಾಲಿಗೆ ನಿಜವೆಂದೇ ಹೇಳಬಹುದು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 69 ವರ್ಷಗಳು ಕಳೆದಿದೆ. ಈ ಮಧ್ಯೆ ಅನೇಕ ಸರ್ಕಾರಗಳು ಆಳಿಹೋಗಿದೆ. ಗರೀಬಿ ಹಠಾವೋ(ಬಡತನ ನಿರ್ಮೂಲನೆ) ಎಂಬ ರಾಜಕೀಯ ಭರವಸೆ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಇದುವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲ ಬಡತನ, ಹಸಿವನ್ನು ದೂರಮಾಡಲು ವಿಫಲವಾಗಿವೆ ಎಂದು ಹೇಳುವುದರಲ್ಲಿ ಯಾವ ತಪ್ಪು ಕೂಡ ಇಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT