ಗುಂಡೇಟಿಗೆ ಮೃತಪಟ್ಟ ನರಭಕ್ಷಕ ಹುಲಿ
ಕೊಯಂಬತ್ತೂರ್: ನೀಲ್ ಗಿರೀಸ್ ನ ದೇವಶೋಲಾ ಎಂಬಲ್ಲಿ ನರ ಭಕ್ಷಕ ಹುಲಿ ಜಾಡು ಹಿಡಿದು ಅದನ್ನು ಹೊಡೆದುರುಳಿಸುವಲ್ಲಿ ವಿಶೇಷ ಕಾರ್ಯಪಡೆ(ಎಸ್ ಟಿಎಫ್) ಯಶಸ್ವಿಯಾಗಿದೆ.
ಶನಿವಾರ ಎಸ್ಟೇಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯನ್ನು ಹುಲಿ ಕೊಂದಿತ್ತು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.
ನರಭಕ್ಷಕ ಹುಲಿಯನ್ನು ಸೆರೆಯಿಡಿಯಲು ವಿಶೇಷ ಕಾರ್ಯಪಡೆ(ಎಸ್ ಟಿಎಫ್)ನ್ನು ರಚಿಸಲಾಗಿತ್ತು. ಹುಲಿಯ ಹೆಜ್ಜೆಯ ಗುರುತುಗಳ ಜಾಡನ್ನು ಹಿಡಿದು ಹೋಗುತ್ತಿರಬೇಕಾದರೆ, ಎಸ್ ಟಿಎಫ್ ನ ಇಬ್ಬರು ಸಿಬ್ಬಂದಿ ಮೇಲೆ ಹುಲಿ ದಾಳಿ ಮಾಡಿದೆ. ರಕ್ಷಣೆಗಾಗಿ ತಕ್ಷಣ ಹುಲಿಯ ಮೇಲೆ ಗುಂಡು ಹಾರಿಸಲಾಗಿದೆ. ಹುಲಿಯು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics