ದೇಶ

ದಲಿತರಿಗೆ ಮೀಸಲಾತಿ ತೆಗೆದುಹಾಕುವ ಉದ್ದೇಶ ಸರ್ಕಾರಕ್ಕೆ ಇಲ್ಲ: ಪ್ರಧಾನಿ ಮೋದಿ

Mainashree
ನವದೆಹಲಿ: ದಲಿತರ ಮೀಸಲಾತಿಯನ್ನು ಬಿಜೆಪಿ ತೆಗೆದುಹಾಕುತ್ತದೆ ಎಂದು ವಿರೋಧ ಪಕ್ಷಗಳು ಮಾಡುತ್ತಿದ್ದ ಆರೋಪವನ್ನು ತಳ್ಳಿಹಾಕಿರುವ ಪ್ರಧಾನಿ ನರೇಂದ್ರ ಮೋದಿ, ದಲಿತರ ಮೀಸಲಾತಿಯನ್ನು ನಮ್ಮ ಸರ್ಕಾರ ತೆಗೆದುಹಾಕುವುಲಿಲ್ಲ ಎಂದು ಹೇಳಿದ್ದಾರೆ. 
ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಭವನದ ಶಿಲನ್ಯಾಸ ಮಾಡಿದ ನಂತರ ಮಾತನಾಡಿದ ಅವರು, ವಾಜಪೇಯಿ ಅವರು ಪ್ರಧಾನಿಯಾದಾಗಲೂ ಇದೇ ರೀತಿ ಆರೋಪಗಳನ್ನು ಮಾಡಲಾಗುತ್ತಿತ್ತು. ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಮೀಸಲಾತಿಯನ್ನು ತೆಗೆದುಹಾಕಿಲ್ಲ. ಬಿಜೆಪಿ ಅಧಿಕಾರಿಕ್ಕೆ ಬಂದರೆ, ದಲಿತರ ಮೀಸಲಾತಿ ತೆಗೆದುಹಾಕಲಾಗುತ್ತದೆ ಎಂದು ಸುಳ್ಳು ಆರೋಪಗಳನ್ನು ಅಂದಿನಿಂದ ಇಂದಿನವರೆಗೆ ಮಾಡುತ್ತಾ ಬರಲಾಗುತ್ತಿದೆ. 
ಆದರೆ, ದಲಿತರು, ಬಡವರು, ಬುಡಕಟ್ಟು ಜನಾಂಗದವರಿಗೆ ಇರುವ ಮೀಸಲಾತಿಯನ್ನು ಬಿಜೆಪಿ ಎಂದಿಗೂ ತೆಗೆದುಹಾಕುವುದಿಲ್ಲ ಎಂದು ಮೋದಿ ಸ್ಪಷ್ಟನೆ ನೀಡಿದ್ದಾರೆ. 
ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅವರಂತೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಸಹ ಅಹಿಂಸಾವಾದಿ ಹೋರಾಟಗಾರ. ಅಂಬೇಡ್ಕರ್ ಕೇವಲ ದಲಿತರ ಉದ್ಧಾರಕ ಎನ್ನುವುದು ಸರಿಯಲ್ಲ. ಅವರು ಬಡವರು ಮತ್ತು ಮಧ್ಯಮವರ್ಗದ ಜನರ ಅಭಿವೃದ್ಧಿ ಬಯಸಿದವರು ಎಂದಿದ್ದಾರೆ. 
ಅಂಬೇಡ್ಕರ್ ವಿಶ್ವ ಮಾನವ. ಜನರನ್ನು ವಿದ್ಯಾರಂತರನ್ನಾಗಿ ಮಾಡಬೇಕು, ಬಡತನವನ್ನು ಅಳಿಸಬೇಕು ಹಾಗೂ ಮಹಿಳೆಯರಿಗೆ ಸಮಾನ ಹಕ್ಕು ಕೊಡಿಸಬೇಕು  ಎಂಬ ಆಶಯ ಹೊಂದಿದ್ದರು ಎಂದು ಮೋದಿ ಹೇಳಿದ್ದಾರೆ.
SCROLL FOR NEXT