ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದ ವಿಚಾರಣೆ ಏಪ್ರಿಲ್ 1ರಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ. ಏಪ್ರಿಲ್ 1ರಂದು ಗಡಿ ವಿವಾದದ ವಿಚಾರಣೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಎದುರು ಬರಲಿದೆ.
ಮಹಾರಾಷ್ಟ್ರ ಪರ ವಕೀಲರು ಮನೋಹರ ಸರೀನ್ ಸಮಿತಿ ಎದುರು ಸಾಕ್ಷಿಗಳನ್ನು ಹಾಗೂ ದಾಖಲೆ ಹಾಜರಪಡಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್ ನಲ್ಲಿ 2002ರಲ್ಲಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿ ಬೆಳಗಾವಿ, ಉತ್ತರ ಕನ್ನಡ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳ ಸುಮಾರು ಮೂರು ಸಾವಿರ ಚದರ ಮೈಲುಗಳಷ್ಟು ವಿಸ್ತೀರ್ಣದ ಒಟ್ಟು 814 ಗ್ರಾಮಗಳು ತನಗೆ ಸೇರಬೇಕೆಂದು ಹಕ್ಕು ಪ್ರತಿಪಾದಿಸಿದೆ.