ದೇಶ

ತರುಣ್ ಗೊಗೋಯ್ ಮತ್ತು ಅವರ ಪತ್ನಿ ಹೆಸರಲ್ಲಿರುವ ಚರಾಸ್ತಿ ರು.99,83,739!

Rashmi Kasaragodu
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಮತ್ತು ಅವರ ಪತ್ನಿ ಹೊಂದಿರುವ ಚರಾಸ್ತಿ ರು. 99,83,739! ಅದೇ ವೇಳೆ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಸರ್ಬಾನಂದ ಸೊನೋವಾಲ್ ಅವರ ಚರಾಸ್ತಿ ಮೌಲ್ಯ ರು.70,44,919 ಆಗಿದೆ.
ನಾಲ್ಕನೇ ಬಾರಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಯಾಗಿ ತಿಟಬೊರ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಗೊಗೋಯ್ ಅವರಲ್ಲಿ ರು. 49,95,022 ಚರಾಸ್ತಿ ಇದೆ. ಏತನ್ಮಧ್ಯೆ ಅವರ ಪತ್ನಿ ಡಾಲಿ ಗೊಗೋಯ್ ಅವರಲ್ಲಿ ರು. 49,88,717 ಇದೆ ನಾಮಪತ್ರ ಸಲ್ಲಿಸುವ ವೇಳೆ ನೀಡಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಗೊಗೋಯ್  ಮತ್ತು ಅವರ ಪತ್ನಿ ಗುವಾಹಟಿ ಮತ್ತು ನವದೆಹಲಿಯಲ್ಲಿ ಭೂಮಿ ಹೊಂದಿದ್ದ್ದು, ರು. 4,25,00,000 ಸ್ಥಿರಾಸ್ತಿ ಇದೆ. ಅದೇ ವೇಳೆ ಬಿಜೆಪಿ ಅಭ್ಯರ್ಥಿಗೆ ರು. 1,15,00,000 ಮೌಲ್ಯದ ಸ್ಥಿರಾಸ್ತಿ ಇದೆ. 
SCROLL FOR NEXT