ಮೈಸೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಕುರಿತು ಸರ್ಕಾರ ಪುನರಾವಲೋಕನ ಮಾಡುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹೇಳಿದ್ದಾರೆ.
ಅಧಿಕಾರಶಾಹಿ ನಡೆಸುವ ಭ್ರಷ್ಟಾಚಾರದ ಬಗ್ಗೆ ಅಧಿಕಾರಶಾಹಿ(ಎಸಿಬಿ) ವ್ಯವಸ್ಥೆಯೇ ತನಿಖೆ ನಡೆಸುವುದು ಸರಿಯಲ್ಲ. ಹಾಗಾಗಿ, ಇನ್ನು ಕಾಲ ಮಿಂಚಿಲ್ಲ, ಸರ್ಕಾರ ಎಸಿಬಿ ರಚನೆ ಕುರಿತು ಪುನರಾವಲೋಕನ ಮಾಡುವುದು ಒಳಿತು ಎಂದು ಅವರು ತಿಳಿಸಿದ್ದಾರೆ.
ಭ್ರಷ್ಟ ಅಧಿಕಾರಿಗಳಿಂದ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಹಗರಣಗಳು ನಡೆದಿವೆ. ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿದರೆ, ಅದು ಆಗುವುದಿಲ್ಲ. ಭ್ರಷ್ಟ ಅಧಿಕಾರಿಗಳನ್ನು ನೇಮಿಸಿದ್ದರಿಂದ ಈ ರೀತಿಯ ಹಗರಣಗಳಾಗಿವೆ. ನ್ಯಾ.ವೆಂಕಾಟಚಲಯ್ಯ ಮತ್ತು ನ್ಯಾ.ಸಂತೋಷ್ ಹೆಗಡೆ ಅಂತಹವರು ಸಂಸ್ಥೆಗೆ ಒಳ್ಳೆ ಹೆಸರನ್ನು ತಂದುಕೊಟ್ಟಿದ್ದಾರೆ. ಹಾಗಾಗಿ, ಎಸಿಬಿ ಸ್ಥಾಪನೆ ಸರಿಯಲ್ಲ ಎಂದು ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.