ಮುಂಬೈ: ಮರಾಠ್ ವಾಡ ಪ್ರತ್ಯೇಕ ರಾಜ್ಯ ರಚನೆ ಕುರಿತು ಹೇಳಿಕೆ ನೀಡಿ ವಿವಾದ ಉಂಟು ಮಾಡಿದ್ದ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್(ಎಜಿ) ಶ್ರೀಹರಿ ಅಣೆ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಿದ ಶ್ರೀಹರಿ ಅಣೆ, ರಾಜೀನಾಮೆ ಪತ್ರವನ್ನು ನೀಡಿದ್ದಾರೆ. 2015 ರ ಅಕ್ಟೋಬರ್ ನಲ್ಲಿ ಸುನಿಲ್ ಮನೋಹರ್ ರಾಜೀನಾಮೆ ನೀಡಿದ್ದ ನಂತರ ಶ್ರೀಹರಿ ಅಣೆ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು. ಶ್ರೀಹರಿ ಅಣೆ, ಈ ಹಿಂದೆಯೂ ವಿದರ್ಭ ಪ್ರತ್ಯೇಕ ರಾಜ್ಯ ಕುರಿತು ಜನಾಭಿಪ್ರಾಯ ಸಂಗ್ರಹಣೆಯಾಗಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದರು.
ಅಡ್ವೊಕೇಟ್ ಜನರಲ್ ಪ್ರತ್ಯೇಕ ರಾಜ್ಯ ರಚನೆ ಕುರಿತು ಹೇಳಿಕೆ ನೀದಿದ್ದಕ್ಕೆ ಮಹಾರಾಷ್ಟ್ರದ ವಿಧಾನಸಭೆಯಲ್ಲೂ ಖಂಡನೆ ವ್ಯಕ್ತವಾಗಿತ್ತು.