ತೇಜಸ್ ಲಘು ಯುದ್ಧ ವಿಮಾನ 
ದೇಶ

ಫೈರ್ ಪವರ್ ಪ್ರದರ್ಶನದ ವೇಳೆ ಗುರಿ ತಲುಪಲು 'ತೇಜಸ್' ಯುದ್ಧ ವಿಮಾನ ವಿಫಲ

ದೇಶೀಯವಾಗಿ ನಿರ್ಮಿಸಲಾಗಿರುವ ಲಘು ಯುದ್ಧ ವಿಮಾನ ತೇಜಸ್ ಫೈರ್ ಪವರ್ ಪ್ರದರ್ಶನದ ವೇಳೆ ಗುರಿ ತಲುಪಲು ವಿಫಲವಾಗಿದೆ.

ನವದೆಹಲಿ: ದೇಶೀಯವಾಗಿ ನಿರ್ಮಿಸಲಾಗಿರುವ ಲಘು ಯುದ್ಧ ವಿಮಾನ ತೇಜಸ್ ಫೈರ್ ಪವರ್ ಪ್ರದರ್ಶನದ ವೇಳೆ ಗುರಿ ತಲುಪಲು ವಿಫಲವಾಗಿದೆ. 
ಫೈರ್ ಪವರ್ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು. ಕಳೆದ ವಾರ ಪಠಾಣ್ ಕೋಟ್ ವಾಯು ನೆಲೆಯಲ್ಲಿ ನಡೆದ ಐರನ್ ಫಿಸ್ಟ್ ತಾಲೀಮು ವೇಳೆ ನಿಗದಿತ ಗುರಿಗೆ ಲೇಸರ್‌ ನಿರ್ದೇಶಿತ ವಿಧಾನದಲ್ಲಿ ಬಾಂಬ್‌ ಹಾಕುವುದಕ್ಕೆ ತೇಜಸ್ ಯುದ್ಧ ವಿಮಾನ ವಿಫಲವಾಗಿದೆ ಎಂದು ಭಾರತೀಯ ವಾಯುಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಆದರೆ ಇದು ತಾಲೀಮಿನ ವೇಳೆ ನಡೆದಿರುವುದರಿಂದ  ತೇಜಸ್ ಲಘು ಯುದ್ಧ ವಿಮಾನ ಗುರಿ ತಲುಪಲು ವಿಫಲವಾಗಿರುವುದನ್ನು ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ ಭಾರತೀಯ ವಾಯುಪಡೆ ಹೇಳಿದೆ. ತೇಜಸ್ ಲಘು ವಿಮಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ವಾಯುಪಡೆಗೆ ಸೇರ್ಪಡೆಗೊಳಿಸಬೇಕೆಂದು ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತೇಜಸ್ ಲಘು ವಿಮಾನದ ತಾಲೀಮು ಪ್ರಾಮುಖ್ಯತೆ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್