ಆಗ್ರಾ: ಆಗ್ರಾದ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಒಳಗಾದ ಮಹಿಳೆಗೆ ಎಚ್ ಐವಿ ಸೋಂಕಿತ ರಕ್ತ ನೀಡಿ, ಶಸ್ತ್ರ ಚಿಕಿತ್ಸೆ ಮಾಡುವ ವೇಳೆ ಹೊಟ್ಟೆಯಲ್ಲೇ ಸ್ಪಾಂಜ್ ಮತ್ತು ಟವೆಲ್ ತುಂಡು ಬಿಟ್ಟು ವೈದ್ಯರು ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ.
ಕಮಲೇಶ್ ಎಂಬ ಮಹಿಳೆಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಕಾಸ್ ಗಂಜ್ ನ ಗೀತಾ ನರ್ಸಿಂಗ್ ಹೋಮ್ ನಲ್ಲಿ ಸಿಸೇರಿಯನ್ ಹೆರಿಗೆ ಆಗಿತ್ತು. ಈ ವೇಳೆ ಆಕೆಗೆ ಅಧಿಕ ರಕ್ತ ಸ್ರಾವವಾದ್ದರಿಂದ 8 ಯೂನಿಟ್ ರಕ್ತ ನೀಡಲಾಗಿತ್ತು.ಮನೆಗೆ ಬಂದ ನಂತರ ಆಕೆಗೆ ತೀವ್ರ ಹೊಟ್ಟೆ ನೋವು ಬರುತ್ತಿತ್ತು. ಇದರಿಂದ ಗಾಬರಿಗೊಂಡ ಆಕೆಯ ಪತಿ ಕಮಲೇಶ್ ಳನ್ನು ಆಗ್ರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಲ್ಲಿ ವೈದ್ಯರು ಹಲವು ಪರೀಕ್ಷೆಗಳನ್ನು ಮಾಡಿದಾಗ ಆಕೆಯ ಹೊಟ್ಟೆಯಲ್ಲಿ ಸ್ಪಾಂಜ್ ಮತ್ತು ಟವೆಲ್ ತುಂಡು ಇರುವುದರ ಜೊತೆಗೆ ಆಕೆಗೆ ಎಚ್ ಐವಿ ಸೋಂಕು ಇರುವುದು ಪತ್ತೆಯಾಯಿತು. ನಂತರ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯೊಳಗಿದ್ದ ಟವೆಲ್ ಮತ್ತು ಸ್ಪಾಂಜ್ ತೆಗೆದರೂ ಆಕೆ ಬದುಕುಳಿಯಲಿಲ್ಲ.
ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಲು ಕಾಸಗಂಜ್ ನ ಆಸ್ಪತ್ರೆ ನಿರಾಕರಿಸಿದೆ, ಈ ಸಂಬಂಧ ಇಬ್ಬರ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ,