ಮುಜಾಫರ್ ನಗರ: 17 ವರ್ಷದ ಅಪ್ರಾಪ್ತೆ ಮೇಲೆ ತನ್ನ ಮನೆಯಲ್ಲಿಯೇ ಯುವಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಮುಜಾಫರ್ ನಗರದ ಪುರ್ಕಾಜಿ ಎಂಬಲ್ಲಿ ನಡೆದಿದೆ.
ಆರೋಪಿ ನದೀಮ್ ಎಂಬಾತನ ಸಹೋದರಿ ಮಾರ್ಚ್ 13 ರಂದು ಅಪ್ರಾಪ್ತೆಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ನದೀಮ್ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ವಿಷಯ ಬಹಿರಂಗ ಪಡಿಸದಂತೆ ಬೆದರಿಕೆ ಹಾಕಿದ್ದಾನೆ, ಒಂದು ವೇಳೆ ಯಾರಿಗಾದರೂ ವಿಷಯ ಹೇಳಿದರೇ ಅತ್ಯಾಚಾರ ನಡೆಸಿರುವ ವಿಡಿಯೋ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವ ಬೆದರಿಕೆ ಹಾಕಿದ್ದಾನೆ.
ನಂತರ ಸಂತ್ರಸ್ತೆ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ ಅತ್ಯಾಚಾರ ಮಾಡುವ ವೇಳೆ ಆರೋಪಿಯ ಕುಟುಂಬದ ಸದಸ್ಯರೆಲ್ಲರೂ ಮನೆಯಲ್ಲಿ ಇದ್ದರೆಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ. ಹಿಗಾಗಿ ಆರೋಪಿ ನದೀಮ್ ತಂದೆ, ತಾಯಿ ಹಾಗೂ ಸಹೋದರಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ನಾಪತ್ತೆಯಾಗಿರುವ ನದೀಮ್ ಗಾಗಿ ಶೋಧ ನಡೆಸಿದ್ದಾರೆ.