ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲಡಾಕ್ ಪ್ರದೇಶದ ಸೀಯಾಚಿನ್ ನಲ್ಲಿ ಶುಕ್ರವಾರ ಹಿಮಾಪಾತವಾಗಿದ್ದು, ಗಸ್ತು ತಿರುಗುತ್ತಿದ್ದ ಒಬ್ಬ ಯೋಧ ನಾಪತ್ತೆಯಾಗಿದ್ದಾರೆ.
ಇಂದು ಸಂಭವಿಸಿದ ಹಿಮಪಾತದಲ್ಲಿ ಇಬ್ಬರು ಯೋಧರು ನಾಪತ್ತೆಯಾಗಿದ್ದರು. ಆ ಪೈಕಿ ಓರ್ವ ಯೋಧನನ್ನು ರಕ್ಷಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಸೇನಾ ವಕ್ತಾರ ಕರ್ನಲ್ ಎಸ್ ಡಿ ಗೋಸ್ವಾಮಿ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಮತ್ತೊಬ್ಬ ಯೋಧನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸುಮಾರು 3 ಸಾವಿರ ಮೀಟರ್ ಎತ್ತರದಲ್ಲಿರುವ ಕುಪ್ವಾರಾ, ಬಾರಾಮುಲ್ಲಾ, ಬಂಡೀಪುರ್ ಹಾಗೂ ಕಾರ್ಗಿಲ್ ಜಿಲ್ಲೆಗಳಲ್ಲಿ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.