ಮುಜಾಫರ್ ನಗರ: ಸಾಲಬಾಧೆಯಿಂದ ಬೇಸತ್ತು ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಾಹಿದ್ ಪುರ್ ಎಂಬ ಹಳ್ಳಿಯಲ್ಲಿ ನಡೆದಿದೆ.
ಅಜಯ್ ಪಾಲ್(55) ಆತ್ಮಹತ್ಯೆ ಮಾಡಿಕೊಂಡ ರೈತ. ಗುರುವಾರದಿಂದ ಅಜಯ್ ಪಾಲ್ ನಾಪತ್ತೆಯಾಗಿದ್ದರು. ನಿನ್ನೆ ಮರಕ್ಕೆ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಜಯ್ ಪಾಲ್ ಅವರು ರು.15 ಸಾವಿರ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸ್ಥಳೀಯ ಸೊಸೈಟಿಯಿಂದ ರು.15 ಸಾವಿರ ಸಾಲ ಪಡೆದಿದ್ದರು. ಆ ಸಾಲವನ್ನು ತೀರಿಸಲಾಗುತ್ತಿಲ್ಲ ಎಂದು ತಂದೆ ತುಂಬಾ ನೊಂದಿದ್ದರು ಎಂದು ಅಜಯ್ ಪಾಲ್ ಪುತ್ರ ಹೇಳಿದ್ದಾರೆ. ರತನ್ ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.