ಬಿಜೆಪಿ ಸಂಸದ ವೃದ್ಧನಿಗೆ ಕಾಲಿನಿಂದ ಒದೆಯುತ್ತಿರುವುದು 
ದೇಶ

ಗುಜರಾತಿನಲ್ಲಿ ವೃದ್ಧನ ಮೇಲೆ ಬಿಜೆಪಿ ಸಂಸದನ ದರ್ಪ

ಗುಜರಾತ್‍ನ ಪೋರಬಂದರ್ ಕ್ಷೇತ್ರದ ಬಿಜೆಪಿ ಸಂಸದ ವಿಠ್ಠಲ್ ರಾದಾಡಿಯಾ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.

ಅಹಮದಾಬಾದ್: ಗುಜರಾತ್‍ನ ಪೋರಬಂದರ್ ಕ್ಷೇತ್ರದ ಬಿಜೆಪಿ ಸಂಸದ ವಿಠ್ಠಲ್ ರಾದಾಡಿಯಾ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.

ರಾಜ್ ಕೋಟ್ ಜಿಲ್ಲೆಯ ಗ್ರಾಮವೊಂದರಲ್ಲಿ ಏರ್ಪಡಿಸಿದ್ದ ಸಾಯಿಬಾಬಾ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಸಂಸದ ರಾದಾಡಿಯಾ ಜಾಡಿಸಿ ಒದ್ದು ತಮ್ಮ ದರ್ಪ ಪ್ರದರ್ಶಿಸಿದ್ದಾರೆ.

ಸಂಸದರ ಅಮಾನವೀಯ ಕೃತ್ಯವನ್ನು ಜನರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು,  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೊಳಪಟ್ಟಿದೆ.

ವೃದ್ಧ ಜನರಲ್ಲಿ ಮೌಡ್ಯ ತುಂಬುವಂತ ಕೆಲಸ ಮಾಡುತ್ತಿದ್ದ. ಹೇಳಿದರೇ ಕೇಳಲಿಲ್ಲ ಎಂದು ಶಾಸಕ ವಿಠ್ಠಲ್ ರಾದಾಡಿಯಾ  ಸ್ಪಷ್ಟನೆ ನೀಡಿದ್ದಾರೆ, ನಾನು ಹಲ್ಲೆ ನಡೆಸಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ.  2012 ರಲ್ಲಿ  ಟೋಲ್‌ಗೇಟ್ ಸಿಬಂದ್ಧಿಗಳ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು.  



Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT