ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ನವದೆಹಲಿ: ಕ್ರೈಸ್ತ ಬಾಂಧವರ ಈಸ್ಟರ್ ಭಾನುವಾರ ಹಬ್ಬದ ಪ್ರಯುಕ್ತ ದೇಶದ ಜನತೆಗೆ ಶುಭಾಶಯ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಗೆ ಭಾನುವಾರ ಚಾಲನೆ ನೀಡಿದರು.
- ಬೆಳಗ್ಗೆ 11 ಗಂಟೆಗೆ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ ಇಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯಕ್ಕೆ ಆಟಗಾರರಿಗೆ ಶುಭ ಕೋರಿದರು.
- ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಆಡಿ ಗೆದ್ದ ಭಾರತ ತಂಡದ ಆಟಗಾರರಿಗೆ ಧನ್ಯವಾದ ಹೇಳಿದರು.
- 17 ವರ್ಷದ ಒಳಗಿನವರಿಗಾಗಿ ಇರುವ ಫೀಫಾ ವಲ್ಡ್ರ್ ಕಪ್-2017 ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಭಾರತ ಹಿಂದೆ ಫೂಟ್ ಬಾಲ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಮ್ಮ ರ್ಯಾಂಕಿಂಗ್ ಮಟ್ಟವೂ ಕುಸಿದಿದೆ-ಪ್ರಧಾನಿ ವಿಷಾದ
- ಯುವಕರು ಫುಟ್ ಬಾಲ್ ಪಂದ್ಯವನ್ನು ಕೂಡ ಐಪಿಎಲ್ ಕ್ರಿಕೆಟ್ ನಂತೆ ಸಂಭ್ರಮಿಸುತ್ತಾರೆ. ಫುಟ್ ಬಾಲ್ ಪಂದ್ಯವನ್ನು ಭಾರತದ ಪ್ರತಿ ಗ್ರಾಮಗಳಿಗೆ ತಲುಪಿಸುವುದು ಮುಖ್ಯ.
- ಫೀಫಾ ವಲ್ಡ್ರ್ ಕಪ್ ಯು-17ರ 2017 ರ ಆತಿಥೇಯ ಭಾರತ ನಿರ್ವಹಿಸುತ್ತಿರುವುದರಿಂದ ಕ್ರೀಡೆಗೆ ಸಂಬಂಧಪಟ್ಟ ಮೂಲ ಸೌಕರ್ಯವನ್ನು ವೃದ್ಧಿಪಡಿಸಲು ನಮಗೆ ಇದೊಂದು ಅವಕಾಶ.
- ಆಕಾಶವಾಣಿಯಲ್ಲಿ ಸರಣಿ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 18ನೇ ಆವೃತ್ತಿ ಇಂದು ಪ್ರಸಾರ. ಇಂದಿನ ಪ್ರಧಾನಿಯವರ ಭಾಷಣದ ಇನ್ನು ಕೆಲವು ಮುಖ್ಯಾಂಶಗಳು ಈ ರೀತಿ ಇವೆ.
- ಮುಂದಿನ ವರ್ಷ ಅಂದರೆ 2017ರಲ್ಲಿ ಭಾರತ 17 ವರ್ಷಕ್ಕಿಂತ ಕೆಳಗಿನ ಹುಡುಗರು ಆಡುವ ಫೀಫಾ ವಿಶ್ವಕಪ್ ನ ಆತಿಥೇಯ ವಹಿಸಲಿದೆ.
- ಫೀಫಾ ವಿಶ್ವಕಪ್ ನಲ್ಲಿ ಭಾರತದ ಬ್ರಾಂಡ್ ಗಳನ್ನು ವಿಶ್ವಕ್ಕೆ ಪರಿಚಯಿಸಲು ಒಂದು ಉತ್ತಮ ಅವಕಾಶವಿದೆ.
- ಏಪ್ರಿಲ್ 7 ವಿಶ್ವ ಆರೋಗ್ಯ ದಿನ. ಈ ವರ್ಷ ಆರೋಗ್ಯ ದಿನವನ್ನು ಡಯಾಬಿಟಿಸ್ ಖಾಯಿಲೆ ವಿಷಯಕ್ಕೆ ಮೀಸಲಿಡಲಾಗಿದೆ.ಡಯಾಬಿಟಿಸ್ ಹೆಚ್ಚಾಗಲು ಮುಖ್ಯ ಕಾರಣ ಜನರ ಜೀವನಶೈಲಿ. ದೇಶದ ಜನರು ಆರೋಗ್ಯವಾಗಿದ್ದರೆ ದೇಶ ಆರೋಗ್ಯವಾಗಿರುತ್ತದೆ ಎಂದ ಮೋದಿ.
- ಪರಿಸರ ಸ್ನೇಹಿ ಗಣಿ ಪ್ರವಾಸೋದ್ಯಮ ಸ್ಥಳಗಳನ್ನು ರಚಿಸಿದ್ದಕ್ಕಾಗಿ ಕೋಲ್ ಇಂಡಿಯಾ ಲಿಮಿಟೆಡ್ ಗೆ ಪ್ರಧಾನಿ ಅಭಿನಂದನೆ.
- ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಯಾಗುತ್ತದೆ. ಇಂದಿನ ಯುವಕರು ಪ್ರವಾಸೋದ್ಯಮದ ಬಗ್ಗೆ, ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಹೋಗುವುದರ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ.
- ಪ್ರವಾಸ ನಮಗೆ ಸಾಕಷ್ಟು ಅನುಭವಗಳನ್ನು ಕಲಿಸುತ್ತದೆ. ಮನೆ, ತರಗತಿ, ಸ್ನೇಹಿತರ ಬಳಿ ಕಲಿಯದಿರುವ ಹಲವು ವಿಷಯಗಳನ್ನು ನಾವು ಪ್ರವಾಸಕ್ಕೆ ಹೋಗುವುದರ ಮೂಲಕ ಕಲಿಯುತ್ತೇವೆ. ಪ್ರವಾಸಕ್ಕೆ ಹೋಗುವಾಗ ಗಮನಿಸದ ಪ್ರವಾಸಿ ರೆಕ್ಕೆಯಿಲ್ಲದ ಹಕ್ಕಿಯಿದ್ದಂತೆ'' ಎಂದರು ಪ್ರಧಾನಿ.
- ದೇಶದ ರೈತರ ಕಾರ್ಯಚಟುವಟಿಕೆಗಳಿಗೆ ನೆರವಾಗಲು ಅಪ್ಲಿಕೇಶನ್ ವೊಂದು ಪ್ರಾರಂಭ. ಇದು ರೈತರಿಗೆ ಪ್ರಯೋಜನವಾಗುತ್ತದೆ ಎಂಬ ನಂಬಿಕೆ.