ದೇಶ

ಜಾಟ್ ಮೀಸಲಾತಿಗೆ ಹರ್ಯಾಣ ಸಂಪುಟ ಅನುಮೋದನೆ

Shilpa D

ಚಂಡಿಘಡ: ಜಾಟ್ ಸಮುದಾಯ ಮೀಸಲಾತಿ ಮಸೂದೆಗೆ ಹರ್ಯಾಣ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಂಪುಟದ ಅನುಮತಿ ದೊರೆತಿದ್ದು ಮಸೂದೆ ಅಂಗೀಕಾರಕ್ಕಾಗಿ ವಿಧಾನ ಸಭೆಗೆ ತರಲಿದೆ.

ಹರ್ಯಾಣದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಜಾಟ್ ಸಮುದಾಯ ಸೇರಿದಂತೆ ಸಿಖ್, ಬಿಶ್ನೋಯಿಸ್, ತ್ಯಾಗೀಸ್ ಮತ್ತು ರೋರ್ಸ್ ಸಮುದಾಯಕ್ಕೂ ಮೀಸಲಾತಿ ನೀಡಲು ಮುಂದಾಗಿದ್ದು ಮಾರ್ಚ್ 31 ರಂದು ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಅಂಗೀಕಾರಕ್ಕೆ ತರಲಿದೆ.

ಸಚಿವ ಸಂಪುಟ ಜಾಟ್ ಸಮುದಾಯದ ಮೀಸಲಾತಿಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ 3 ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈ ಬಿಡಲಾಗಿದೆ.

SCROLL FOR NEXT