ನವದೆಹಲಿ: ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ಜಂಟಿ ತನಿಖಾ ತಂಡ(ಜೆಐಟಿ)ಕ್ಕೆ ವಾಯುನೆಲೆ ಪ್ರವೇಶಿಸಿಲು ಅನುಮತಿ ನೀಡಿಲ್ಲ. ಅವರು ಕೇವಲ ದಾಳಿ ನಡೆದ ಸ್ಥಳಕ್ಕೆ ಮಾತ್ರ ಭೇಟಿ ನೀಡಬಹುದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸೋಮವಾರ ಹೇಳಿದ್ದಾರೆ.
ಪಠಾಣ್ ಕೋಟ್ ವಾಯು ನೆಲೆಯ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಲು ನಾವು ಪಾಕ್ ತನಿಖಾ ತಂಡಕ್ಕೆ ಅವಕಾಶ ನೀಡಿಲ್ಲ ಎಂದು ರಕ್ಷಣಾ ಸಚಿವರು ಸ್ಪಷ್ಟಪಡಿಸಿದ್ದಾರೆ.
ಪಾಕ್ ತನಿಖಾ ತಂಡಕ್ಕೆ ಉಗ್ರರು ದಾಳಿ ನಡೆಸಿದ ಸ್ಥಳಕ್ಕೆ ಭೇಟಿ ನೀಡಲು ಮಾತ್ರ ಅನುಮತಿ ನೀಡಲಾಗಿದೆ ಮತ್ತು ಆ ಪ್ರದೇಶದಲ್ಲಿ ಬಿಗಿ ಭದ್ರತೆ ಇದ್ದು, ಎನ್ಐಎ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಪರಿಕ್ಕರ್ ಹೇಳಿದ್ದಾರೆ.
ಕಳೆದ ಜನವರಿಯಲ್ಲಿ ನಡೆದ ಪಠಾಣ್ ಕೋಟ್ ದಾಳಿ ಪ್ರಕರಣದ ತನಿಖೆಗಾಗಿ ಪಾಕಿಸ್ತಾನದ ಭದ್ರತಾ ಅಧಿಕಾರಿಗಳ ತಂಡ ಇಂದು ದೆಹಲಿಗೆ ಆಗಮಿಸಿದ್ದು, ನಾಳೆ ಪಠಾಣ್ ಕೋಟ್ ಗೆ ಭೇಟಿ ನೀಡಲಿದೆ.
ಜ.2 ರಂದು ಪಂಜಾಬ್ ನ ಪಠಾಣ್ ಕೋಟ್ ವಾಯು ನೆಲೆಯಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕರಿಗೂ ಪಾಕಿಸ್ತಾನದ ಜೈಶ್-ಇ- ಮೊಹಮ್ಮದ್ ಉಗ್ರ ಸಂಘಟನೆಗೂ ನಂಟಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ರಚನೆ ಮಾಡಿರುವ ಜಂಟಿ ತನಿಖಾ ತಂಡ ಭಾರತಕ್ಕೆ ಆಗಮಿಸಿ ತನಿಖೆ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics