ಗುವಾಹಟಿ: ಇಲ್ಲಿನ ಕೊಳಚೆ ಪ್ರದೇಶವೊಂದರಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದ ಪರಿಣಾಮ ಸ್ಥಳೀಯ ನಿವಾಸಿಗಳು ಕಟ್ಟಿಕೊಂಡಿದ್ದ ಸುಮಾರು 200 ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಗಾಹುತಿಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಇಂದು ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಸುದ್ದಿ ತಿಳಿದ ಕೂಡಲೇ ಅಗ್ನಿ ಶಾಮದ ದಳದ 15ಕ್ಕೂ ಹೆಚ್ಚು ವಾಹನಗಳು ಕೊಳಗೇರಿಗೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದೆ.
ಭಾರೀ ಬೆಂಕಿ ಅವಘಡದ ಪರಿಣಾಮ ಕೊಳಗೇರಿಯ ಗುಡಿಸಲುಗಳು ಸುಟ್ಟಿ ಹೊಗಿದ್ದು, ದಿನನಿತ್ಯ ಜನರು ಬಳಸುತ್ತಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಅನಾಹುತದಿಂದ ಅಲ್ಲಿನ ಜನತೆ ಬೀದಿಪಾಲಾಗಿದ್ದು, ಘಟನೆ ವೇಳೆ ಯಾವುದೇ ಪ್ರಾಣ ಹಾನಿಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.