ದೇಶ

ಭಾರತ ಮಾತೆಗೆ ಜೈ ಎಂದು ಘೋಷಣೆ ಕೂಗಲು ಒತ್ತಾಯ ಬೇಡ: ಮೋಹನ್ ಭಾಗವತ್

Shilpa D

ಲಕ್ನೋ: ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುವಂತೆ ಜನರನ್ನು ಒತ್ತಾಯಿಸುವುದು ಬೇಡ. ಅವರಾಗಿಯೇ ಇಷ್ಟ ಪಟ್ಟು ಕೂಗುವುದಿದ್ದರೇ ಕೂಗಲಿ, ಒತ್ತಡ ಹೇರುವುದು ಬೇಡ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಸಂಘಟನೆಯ ಸದಸ್ಯರಿಗೆ ಸೂಚಿಸಿದ್ದಾರೆ.

ಲಖನೌದಲ್ಲಿ  ಚಾರಿತ್ರಿಕ ಸ್ಮೃತಿಭವನವನ್ನು ಜನತೆಗೆ ಅರ್ಪಿಸುತ್ತಾ  ಮಾತನಾಡಿದ ಭಾಗವತ್ ‘ಜನತೆ ತಾವಾಗಿಯೇ ಘೋಷಣೆ ಕೂಗುವಂತೆ ನಮ್ಮ ವರ್ತನೆ ಇರಬೇಕು. ಘೋಷಣೆ ಕೂಗುವ ಆಸಕ್ತಿ ಒಳಗಿನಿಂದಲೇ ಮೂಡಿಬರಬೇಕು’ ಎಂದು ಭಾಗವತ್ ತಿಳಿಸಿದ್ದಾರೆ.

‘ಸರ್ವ ಸಮಾಜ’ದ ಕಲ್ಪನೆ ಬಗ್ಗೆ ಮಾತನಾಡಿದ ಭಾಗವತ್, ರಾಷ್ಟ್ರೀಯ ಘೋಷಣೆಗಳನ್ನು ಉಚ್ಚರಿಸುವ ಪ್ರಕ್ರಿಯೆ ಸ್ವಯಂ ಇಚ್ಛೆಯದಾಗಬೇಕು, ಕಡ್ಡಾಯ ಕವಾಯತು ಅಲ್ಲ. ಪ್ರತಿಯೊಬ್ಬರೂ ನಮ್ಮವರೇ, ನಾವು ಎಲ್ಲರನ್ನೂ ಜೊತೆಗೆ ಒಯ್ಯಬೇಕು’ ಎಂದು ಹೇಳಿದರು.

ಕೋಲ್ಕತದಲ್ಲಿ ಭಾನುವಾರ ನೀಡಿದ್ದ ಹೇಳಿಕೆಯಲ್ಲಿ ಭಾಗವತ್ ಅವರು ಇಡೀ ವಿಶ್ವವೇ ಭಾರತ ಮಾತೆಗೆ ಜಯಘೋಷ ಹೇಳುವಂತೆ ಮಾಡುವುದು ಆರೆಸ್ಸೆಸ್​ನ ಗುರಿ ಎಂದು ತಿಳಿಸಿದ್ದರು.  

SCROLL FOR NEXT