ನವದೆಹಲಿ: ಕ್ಷುಲ್ಲಕ ಕಾರಣಕ್ಕೆ 18 ವರ್ಷದ ಯುವಕನ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಘಟನೆ ದೆಹಲಿಯ ಬೇಗಂಪುರ್ ಪ್ರದೇಶದಲ್ಲಿ ನಡೆದಿದೆ.
ದೆಹಲಿಯ ಮದ್ರಾಸಾ ವೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಬಿಹಾರ ಮೂಲದ ಮೂವರು ವಿದ್ಯಾರ್ಥಿಗಳು, ಮದ್ರಸಾದಿಂದ 300 ಮೀಟರ್ ದೂರದಲ್ಲಿರುವ ಬನ್ಸ್ ವಾಲಾ ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಬಂದ ಯುವಕರ ಗುಂಪೊಂದು ನಮ್ಮ ತಲೆಯ ಮೇಲಿದ್ದ ಕ್ಯಾಪ್ ನೋಡಿ. ಜೈ ಮಾತಾ ಕೀ , ಜೈಭಾರತ್ ಎಂದು ಘೋಷಣೆ ಕೂಗುವಂತೆ ಹೇಳಿದೆ. ಆದರೆ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ. ಘೋಷಣೆ ಕೂಗದ ಹಿನ್ನೆಲೆಯಲ್ಲಿ ದಿಲ್ಕಾಶ್ ಸೇರಿದಂತೆ ಆತನ ಇನ್ನಿಬ್ಬರ ಸ್ನೇಹಿಕರಿಗೆ ಮನಬಂದಂತೆ ಥಳಿಸಿದ್ದಾರೆ,
ದಿಲ್ಕಾಶ್ ಗೆ ಮೂಳೆ ಮುರಿದಿದ್ದು, ಈಸಂಬಂಧ ಮೂವರನ್ನು ಬಂಧಿಸಲಾಗಿದೆ. ಬಿಹಾರದ ವಿದ್ಯಾರ್ಥಿಗಳಾದ ಈ ದಿಲ್ಕಾಶ್, ಅಜ್ಮಲ್ ಹಾಗೂ ನಯೀಮ್ ಅವರು 2015 ರಲ್ಲಿ ವಿದ್ಯಾಭ್ಯಾಸಕ್ಕಾಗಿ ದೆಹಲಿಯ ಫೈಜಾ ಉಲ್ ಉಲೂಮಾ ಗೌಸಿಯಾ ಮದ್ರಸಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ,