ಸಾಂದರ್ಭಿಕ ಚಿತ್ರ 
ದೇಶ

2015 ರಲ್ಲಿ 4 ಸಾವಿರ ಶ್ರೀಮಂತ ಭಾರತೀಯರು ವಿದೇಶಕ್ಕೆ ವಲಸೆ : ವರದಿ

ಭಾರತದ 4,000 ಆಗರ್ಭ ಶ್ರೀಮಂತರು ವಿದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ಕಳೆದ ವರ್ಷದ ಅಂಕಿ ಅಂಶಗಳು ತಿಳಿಸಿವೆ. ಜಾಗತಿಕವಾಗಿ ಶೀಮಂತರು ದೇಶ ತೊರೆಯುವ ..

ನವದೆಹಲಿ: ಭಾರತದ 4,000 ಆಗರ್ಭ ಶ್ರೀಮಂತರು ವಿದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ಕಳೆದ ವರ್ಷದ ಅಂಕಿ ಅಂಶಗಳು ತಿಳಿಸಿವೆ. ಜಾಗತಿಕವಾಗಿ ಶೀಮಂತರು ದೇಶ ತೊರೆಯುವ ರಾಷ್ಟ್ರಗಳ ಪೈಕಿ, ಭಾರತ ನಾಲ್ಕನೇ ದೊಡ್ಡ ರಾಷ್ಟ್ರವಾಗಿದೆ .

2015 ರ ಅಂಕಿ ಅಂಶಗಳ ಪ್ರಕಾರ, 4000 ಭಾರತೀಯ ಶ್ರೀಮಂತರು ದೇಶದಿಂದ ವಲಸೆ ಹೋಗಿದ್ದಾರೆ. ಆಗರ್ಭ ಶ್ರೀಮಂತರು ದೇಶ ತೊರೆಯುವ ರಾಷ್ಟ್ರಗಳ ಪೈಕಿ ಫ್ರಾನ್ಸ್ ಮೊದಲ ಸ್ಥಾನದಲ್ಲಿದ್ದು, 10 ಸಾವಿರ ಶ್ರೀಮಂತರು ದೇಶ ತೊರೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಲಸೆ ಹೋಗುವ ಸಿರಿವಂತರ ಸಂಖ್ಯೆ ಭಾರತ ಮತ್ತು ಚೀನಾ ದೇಶದಲ್ಲಿ ಇತ್ತೀಚೆಗೆ ಹೆಚ್ಚಿದೆ. ವಲಸೆ ಹೋಗುವ ಶ್ರೀಮಂತರಿಗಿಂತ ಹೊಸದಾಗಿ ಶ್ರೀಮಂತರಾಗುತ್ತಿರುವ ಸಂಖ್ಯೆ ಭಾರತ ಮತ್ತು ಚೀನಾ ದೇಶದಲ್ಲಿ ಹೆಚ್ಚಿಗೆ ಇದೆ. ಈ ದೇಶಗಳಲ್ಲಿ ಜೀವನ ಮಟ್ಟದಲ್ಲಿ ಸುಧಾರಣೆ ಕಂಡು ಬಂದರೆ ವಲಸೆ ಹೋದ ಅನೇಕ ಶ್ರೀಮಂತರು ಮರಳಿ ತಮ್ಮ ದೇಶಕ್ಕೆ ಬರುವ ಸಾಧ್ಯತೆ ಇದೆ.

ಹೀಗೆ ಶ್ರೀಮಂತರು ವಲಸೆ ಹೋಗುವ ದೇಶಗಳ ಪೈಕಿ ಪ್ರಾನ್ಸ್ ಮೊದಲ ಸ್ಥಾನದಲ್ಲಿದೆ. ಚೀನಾದಿಂದ 9 ಸಾವಿರ ಶ್ರೀಮಂತರು ವಲಸೆ ಹೋಗಿದ್ದು, ವಲಸೆ ಹೋಗುವ ರಾಷ್ಟ್ರಗಳ ಪೈಕಿ ಚೀನಾ ಎರಡನೆ ಸ್ಥಾನದಲ್ಲಿದೆ. ಚೀನಾದಿಂದ 6 ಸಾವಿರ ಶ್ರೀಮಂತರು ವಲಸೆ ಹೋಗಿದ್ದು, ಇಟಲಿ ಮೂರನೆ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT