ರಾಯ್ ಪುರ: ಛತ್ತೀಸ್ ಗಢದಲ್ಲಿ ಹತ್ಯೆಗೀಡಾದ ಸಿಆರ್ ಪಿಎಫ್ ಯೋಧರ ಚಲನವಲನಗಳ ಮಾಹಿತಿ ಸೋರಿಕೆಯಾಗಿತ್ತು ಎಂದು ಸಿ ಆರ್ ಪಿಎಫ್ ಹೇಳಿದೆ.
ದಂತೇವಾಡದಲ್ಲಿ ನಡೆದ ಸ್ಫೋಟದಲ್ಲಿ ಸಿಆರ್ ಪಿಎಫ್ ಯೋಧರು ಮೃತಪಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ ಆರ್ ಪಿಎಫ್, ಹುತಾತ್ಮರಾದ ತನ್ನ ಸಿಬ್ಬಂದಿಗಳ ಚಲನವಲನಗಳ ಬಗ್ಗೆ ಮಾಹಿತಿ ಸೋರಿಕೆಯಾಗಿತ್ತು, ಈ ಕುರಿತು ಒಳಗಿನಿಂದಲೇ ಮಾಹಿತಿ ಸೋರಿಕೆಯಾಗಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಹುತಾತ್ಮರಾದ ಯೋಧರು ಕಾರ್ಯಾಚರಣೆ ನಡೆಸುತ್ತಿರಲಿಲ್ಲವಾದ್ದರಿಂದ ಮುಫ್ತಿಯಲ್ಲಿದ್ದರು ಈ ಸಂದರ್ಭದಲ್ಲಿ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿ ಆರ್ ಪಿಎಫ್ ಜನರಲ್ ಕೆ ದುರ್ಗಾ ಪ್ರಸಾದ್ ಹೇಳಿದ್ದಾರೆ.
ದಂತೇವಾಡದಲ್ಲಿ ನಕ್ಸಲರು ನಡೆಸಿದ ಸ್ಫೋಟಕ್ಕೆ 7 ಸಿಆರ್ ಪಿಎಫ್ ಯೋಧರು ಬಲಿಯಾಗಿದ್ದರು.