ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ 
ದೇಶ

ಜೈಶ್ ಇ ಮುಖ್ಯಸ್ಥನಿಗೆ ಬಹಿಷ್ಕಾರ ಹಾಕಲು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಯತ್ನಕ್ಕೆ ಚೀನಾದಿಂದ ಮತ್ತೆ ಅಡ್ಡಗಾಲು

ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ...

ನವದೆಹಲಿ: ಪಠಾಣ್ ಕೋಟ್  ವಾಯುನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಗೆ ಬಹಿಷ್ಕಾರ ಹಾಕಬೇಕೆಂದು ವಿಶ್ವಸಂಸ್ಥೆಯನ್ನು ಕೋರಲು ಭಾರತ ಮಾಡುತ್ತಿರುವ ಪ್ರಯತ್ನಕ್ಕೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ.

ಮಸೂದ್ ಅಜರ್ ಗೆ ಬಹಿಷ್ಕಾರ ಹೇರುವ ಗಡುವು ಇಂದಿಗೆ ಮುಕ್ತಾಯವಾಗುತ್ತಿದೆ. ಅದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ವಿಶ್ವಸಂಸ್ಥೆಯ ಸಮಿತಿಗೆ ಮನವಿ ಮಾಡಿರುವ ಚೀನಾ ತನ್ನ ನಿರ್ಧಾರವನ್ನು ತಡೆಹಿಡಿಯಬೇಕೆಂದು ವಿಶ್ವಸಂಸ್ಥೆಗೆ ಮನವಿ ಮಾಡಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಜನವರಿ 2ರಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ನಂತರ ಫೆಬ್ರವರಿಯಲ್ಲಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದ ಭಾರತ, ಆಲ್ ಖೈದಾ ನಿಷೇಧ ಸಮಿತಿಯ ಪಟ್ಟಿಯಲ್ಲಿ ಸೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು. ದಾಳಿಯಲ್ಲಿ ಭಯೋತ್ಪಾದಕರ ಪಾತ್ರವಿರುವ ಬಗ್ಗೆ ಬಲವಾದ ಸಾಕ್ಷಿಯನ್ನು ಭಾರತ ಒದಗಿಸಿತ್ತು ಕೂಡ.

ಭಾರತ ಒದಗಿಸಿದ್ದ ಸಾಕ್ಷಿಗಳ ತಾಂತ್ರಿಕ ಅಂಶಗಳನ್ನು ಭಯೋತ್ಪಾದನೆ ನಿಗ್ರಹ ಕಾರ್ಯಕಾರಿ ನಿರ್ದೇಶನಾಲಯ ಪರಿಗಣಿಸಿತ್ತು. ತಾಂತ್ರಿಕ ತಂಡ ನಂತರ ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ನೆರವಿನೊಂದಿಗೆ ಎಲ್ಲಾ ಸದಸ್ಯರಿಗೆ ಕಳುಹಿಸಿತ್ತು. ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಯಾವುದೇ ತಕರಾರುಗಳಿಲ್ಲದಿದ್ದರೆ ಗಡುವಿನ ದಿನ ಮುಗಿಯುವುದರೊಳಗೆ ಜೈಶ್ ಇ ಮೊಹಮ್ಮದ್ ಸಂಘಟನೆಗೆ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿತ್ತು. ಆದರೆ ಆ ಗಡುವು ಮುಗಿಯುವುದರೊಳಗೆ ತನ್ನ ಆಕ್ಷೇಪವೆತ್ತಿದ ಚೀನಾ ಜೈಶ್ ಇ ಮೊಹಮ್ಮದ್ ಸಂಘಟನೆಯ ನಿಷೇಧ ಕ್ರಮವನ್ನು ತಡೆಹಿಡಿಯಬೇಕೆಂದು ವಿಶ್ವಸಂಸ್ಥೆಗೆ ಕೋರಿದೆ. ಚೀನಾ ವಿಶ್ವಸಂಸ್ಥೆಯ ಸಮಿತಿಯಲ್ಲಿಲ್ಲದಿರುವ ಪಾಕಿಸ್ತಾನದ ಅಭಿಪ್ರಾಯ ಕೇಳಿ ಈ ರೀತಿ ಮನವಿ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!