ನವದೆಹಲಿ: ಬಿಹಾರ ಸಿಎಂ ನಿತೀಶ್ ಕುಮಾರ್ ದೇಶದ ಪ್ರಧಾನಿಯಾಗಬೇಕು ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ದೇಶದ ಉಪಪ್ರಧಾನಿಯಾಗಬೇಕೆಂದು ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ ನ್ಯಾ. ಮಾರ್ಕಾಂಡೇಯ ಕಾಟ್ಜು ಹೇಳಿದ್ದಾರೆ.
ಫೇಸ್ ಬುಕ್ ಪೇಜ್ ನಲ್ಲಿ ಬರೆದಿರುವ ನ್ಯಾ.ಕಾಟ್ಜು , ಇಬ್ಬರೂ ನಾಯಕರ ವೈಯಕ್ತಿಕ ಸಮಗ್ರತೆ ವಿರುದ್ಧ ಯಾವುದೇ ಆರೋಪ ಕೇಳಿಲ್ಲವಾದ್ದರಿಂದ ಇಬ್ಬರೂ ನಾಯಕರು ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಹಲವು ಬಾರಿ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ಮಾರ್ಕಾಂಡೇಯ ಕಾಟ್ಜು, ಈಗ ನಿತೀಶ್ ಕುಮಾರ್ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನಿತೀಶ್ ಕುಮಾರ್ ಪ್ರಧಾನಿ ಅರವಿಂದ್ ಕೇಜ್ರಿವಾಲ್ ಉಪಪ್ರಧಾನಿಯಾಗಬೇಕೆಂದು ಹೇಳಿದ್ದು ಈ ಬಗ್ಗೆ ಜನತೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.