ಸಾಂದರ್ಭಿಕ ಚಿತ್ರ 
ದೇಶ

ಪಶ್ಚಿಮ ಬಂಗಾಳ: ಮೊದಲ ಬಾರಿಗೆ ಮತ ಚಲಾಯಿಸಲಿರುವ ಎನ್ ಕ್ಲೇವ್ ನಿವಾಸಿಗಳು

ಪಶ್ಚಿಮ ಬಂಗಾಳದಲ್ಲಿ ಇದೇ 5ರಂದು ನಡೆಯಲಿರುವ 6ನೇ ಹಂತದ ಚುನಾವಣೆಯಲ್ಲಿ ಸ್ವಾತಂತ್ರ್ಯ ಸಿಕ್ಕಿದ...

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇದೇ 5ರಂದು ನಡೆಯಲಿರುವ 6ನೇ ಹಂತದ ಚುನಾವಣೆಯಲ್ಲಿ ಸ್ವಾತಂತ್ರ್ಯ ಸಿಕ್ಕಿದ ನಂತರ ಇದೇ ಮೊದಲ ಬಾರಿಗೆ ಕೂಚ್ ಬೆಹರ್ ಜಿಲ್ಲೆಯ ಸುಮಾರು 9 ಸಾವಿರ ಎನ್ ಕ್ಲೇವ್ ನಿವಾಸಿಗಳು ಮತ ಚಲಾಯಿಸಲಿದ್ದಾರೆ.

ಕೋಲ್ಕತ್ತಾದ ಕೂಚ್ ಬೆಹರ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ 51 ಪರಾವೃತ ಪ್ರದೇಶದಲ್ಲಿ 14 ಸಾವಿರದ 864 ಜನರು ನೆಲೆಸಿದ್ದಾರೆ. ಅವರಲ್ಲಿ 9 ಸಾವಿರದ 540 ಅರ್ಹ ಮತದಾರರಿದ್ದಾರೆ ಎಂದು ಹೆಚ್ಚುವರಿ ಚುನಾವಣಾಧಿಕಾರಿ ದಿಬ್ಯೇಂದು ಸರ್ಕಾರ್ ತಿಳಿಸಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ಕಳೆದ ವರ್ಷ ಭೂ ಪರಿದಿ ಒಪ್ಪಂದಕ್ಕೆ ಸಹಿ ಹಾಕಿದ್ದವು.ಈ ಒಪ್ಪಂದದಂತೆ ಬಾಂಗ್ಲಾದೇಶ ತನ್ನ ಬಳಿಯಿದ್ದ 51 ಆವೃತ ಪ್ರದೇಶವನ್ನು ಭಾರತಕ್ಕೆ ವರ್ಗಾಯಿಸಿದೆ. ಅದೇ ರೀತಿ ಭಾರತ 111 ಪರಾವೃತ ಪ್ರದೇಶಗಳನ್ನು ಬಾಂಗ್ಲಾಗೆ ಬಿಟ್ಟುಕೊಟ್ಟಿತ್ತು. ಬಾಂಗ್ಲಾದಿಂದ ಭಾರತಕ್ಕೆ ಸೇರಿದ ಪ್ರದೇಶಗಳ ಜನರು ಇದೀಗ ಮತ ಚಲಾವಣೆ ಹಕ್ಕು ಪಡೆದುಕೊಂಡಿದ್ದಾರೆ. ಇವರಿಗೆ ಮತದಾನದ ಬಗ್ಗೆ ಸಂಪೂರ್ಣ ಅರಿವು ನೀಡಲಾಗಿದೆ ಎಂದು ಸರ್ಕಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!