ದೇಶ

ಚಂಡೀಗಢ: ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿರುವ ಹಸು ಮತ್ತು ಗೂಳಿಗಳು

Sumana Upadhyaya

ಚಂಡೀಗಢ: ಮಾಡೆಲ್ ಗಳ, ಸೆಲೆಬ್ರಿಟಿಗಳ, ಫಿಲ್ಮ್ ಸ್ಟಾರ್ ಗಳ ರ್ಯಾಂಪ್ ವಾಕ್ ಕೇಳಿದ್ದೀರಿ, ನೋಡಿದ್ದೀರಿ. ಆದರೆ ಇಲ್ಲಿ ನಡೆಯುತ್ತಿರುವುದು ಹಸು ಮತ್ತು ಗೂಳಿಗಳ ರ್ಯಾಂಪ್ ವಾಕ್. ಚಂಡೀಗಢದ ರೋಹ್ ಟಕ್ ಜಿಲ್ಲೆಯ ಬಹು ಅಕ್ಬರ್ಪುರ್ ಗ್ರಾಮದಲ್ಲಿನ ಅಂತಾರಾಷ್ಟ್ರೀಯ ಪಶುವೈದ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇದೇ ಶುಕ್ರವಾರ ಮತ್ತು ಶನಿವಾರ ಸ್ವದೇಶಿ ಹಸು ಮತ್ತು ಗೂಳಿ ತಳಿಗಳ ಪ್ರದರ್ಶನ ನಡೆಯಲಿದೆ.

ಉತ್ತಮ ಹಸು ಮತ್ತು ಗೂಳಿಗಳನ್ನು ತೀರ್ಪುಗಾರರ ವಿಭಾಗವೊಂದು ಆಯ್ಕೆ ಮಾಡುತ್ತದೆ. ರಾಜ್ಯ ಚಾಂಪಿಯನ್, ತಳಿ ಚಾಂಪಿಯನ್ ಎಂದು ನಗದು ಬಹುಮಾನ ನೀಡಲಾಗುತ್ತದೆ.
ತರ್ಪರ್ಕರ್, ರತಿ, ಬೆಲಹಿ, ಗಿರ್, ಸಹಿವಾಲ್ ಮತ್ತು ಮುರ್ರ ಎಂಬ ಆರು ತಳಿಯ ಹಸುಗಳು ಪ್ರದರ್ಶನದಲ್ಲಿ ಭಾಗವಹಿಸುತ್ತವೆ. ಪ್ರದರ್ಶನದ ಭಾಗವಾಗಿ ರಾಜ್ಯ ಮಟ್ಟದ ಸ್ವದೇಶಿ ಹಸುವಿನ ಹಾಲು ಇಳುವರಿ ಸ್ಪರ್ಧೆ ಕೂಡ ನಡೆಯಲಿದೆ. ಸ್ವದೇಶಿ ತಳಿಯ ಗುಣಲಕ್ಷಣಗಳನ್ನು ಹೊಂದಿರುವ ಹಸುಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತವೆ. ರಾಜ್ಯದಲ್ಲಿ ಸ್ವದೇಶಿ ತಳಿ ಹಸು ಮತ್ತು ಗೂಳಿಗಳ ಸಂಖ್ಯೆಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸ್ವದೇಶಿ ಹಸುಗಳಿಗೆ ವಿದೇಶಿ ತಳಿಗಳ ಇನ್ಸಾಮಿನೇಷನ್ ಮಾಡಿಸಬಾರದು ಎಂದು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಚಂಡೀಗಢ ಸರ್ಕಾರ ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ಇಂತಹದೇ ಪ್ರದರ್ಶನ ಏರ್ಪಡಿಸಿತ್ತು.

SCROLL FOR NEXT