ಅತ್ಯಾಚಾರ 
ದೇಶ

ಮಗಳ ಮೇಲೆ ಅತ್ಯಾಚಾರ: 27 ವರ್ಷ ಬಳಿಕ ಚಿಕ್ಕಪ್ಪನಿಗೆ 7 ವರ್ಷ ಜೈಲು ಶಿಕ್ಷೆ

27 ವರ್ಷಗಳ ಹಿಂದೆ ತನ್ನ ಚಿಕ್ಕಪ್ಪನಿಂದ ನಿರಂತರ ಅತ್ಯಾಚಾರಕ್ಕೆ ಗುರಿಯಾಗಿ ಸದ್ಯ ಬ್ರಿಟನ್ ನಲ್ಲಿ ವಾಸವಾಗಿರುವ 36ರ ಹರೆಯದ ಸಂತ್ರಸ್ತ...

ಅಮೃತ್‌ಸರ : 27 ವರ್ಷಗಳ ಹಿಂದೆ ತನ್ನ ಚಿಕ್ಕಪ್ಪನಿಂದ ನಿರಂತರ ಅತ್ಯಾಚಾರಕ್ಕೆ ಗುರಿಯಾಗಿ ಸದ್ಯ ಬ್ರಿಟನ್ ನಲ್ಲಿ ವಾಸವಾಗಿರುವ 36ರ ಹರೆಯದ ಸಂತ್ರಸ್ತ ಮಹಿಳೆ ಇ-ಮೇಲ್ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಆರೋಪಿಗೆ 7 ವರ್ಷಗಳ ಜೈಲು ಶಿಕ್ಷೆಯಾಗಿದೆ.

ತಾಯಿಯ ಆಸೆಯಂತೆ ಅಮೃತ್ ಸರದ ರಾಣಿಬಾಗ್ ನಲ್ಲಿ ವಾಸವಾಗಿದ್ದ ಚಿಕ್ಕಪ್ಪನ ಮನೆಯಲ್ಲಿ ಓದಲು ಬಂದಿದ್ದ ಬಾಲಕಿ ಮೇಲೆ ಆರೋಪಿ ಸುಖವಂತ್ ಸಿಂಗ್ ಸಿಧು ನಿರಂತರವಾಗಿ ಅತ್ಯಾಚಾರ ನಡೆಸಿದ ಆರೋಪ ಸಾಬೀತಾಗಿದ್ದು, 60ರ ಹರೆಯದ ಸುಖವಂತ್ ಗೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶೆ ಹರ್‌ಪ್ರೀತ್‌ ಕೌರ್‌ ಅವರು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಸದ್ಯ ಜಾಮೀನಿನ ಮೇಲೆ ಹೊರಗಿದ್ದ ಸುಖವಂತ್ ನನ್ನು ತೀರ್ಪು ಬಂದ ತಕ್ಷಣ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆ 1980ರಲ್ಲಿ ಜನಿಸಿದ್ದು, ಚಿಕ್ಕಪ್ಪ ಸುಖವಂತ್ ಮನೆಯಲ್ಲಿದ್ದುಕೊಂಡು ಓದುತ್ತಿದ್ದಾಗ ಸುಖವಂತ್ ಸಿಂಗ್ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಎಂದು ಸಂತ್ರಸ್ತ ಮಹಿಳೆಯು ಐಜಿಪಿ ಅವರಿಗೆ ನೇರವಾಗಿ ಇ-ಮೇಲ್‌ ಮೂಲಕ ತನ್ನ ದೂರನ್ನು ಸಲ್ಲಿಸಿದ್ದಳು. ಇದನ್ನು ಆಧರಿಸಿ ಆರೋಪಿಯ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಯಿತು ಎಂದು ಎನ್‌ಆರ್‌ಐ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಪ್ಪನಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರು ಭಯ, ಸಂಕೋಚ, ಹತಾಶೆ, ಜುಗುಪ್ಸೆಯಿಂದಾಗಿ ಈ ವಿಷಯವನ್ನು ಯಾರಲ್ಲೂ ಹೇಳಿರಲಿಲ್ಲ ಎಂದು ಮಹಿಳೆ ತಿಳಿಸಿದ್ದಾಳೆ. ಇನ್ನು ಬ್ರಿಟನ್ ಗೆ ತೆರಳಿದ ಬಳಿಕ 2014ರ ಮೇ 5ರಂದು ಎನ್‌ಆರ್‌ಐ ಪೊಲೀಸ್‌ ಠಾಣೆಯಲ್ಲಿ ಸುಖವಂತ್‌ ವಿರುದ್ಧ ರೇಪ್‌ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ