ನಟ, ರಾಜಕಾರಣಿ ಶರತ್ ಕುಮಾರ್ ( ಸಂಗ್ರಹ ಚಿತ್ರ) 
ದೇಶ

ನಟ, ರಾಜಕಾರಣಿ ಶರತ್ ಕುಮಾರ್ ಕಾರಿನಿಂದ 9 ಲಕ್ಷ ರೂ ವಶಪಡಿಸಿಕೊಂಡ ಅಧಿಕಾರಿಗಳು

ತಮಿಳುನಾಡಿನ ಖ್ಯಾತ ನಟ ಹಾಗೂ ರಾಜಕಾರಣಿ ಆರ್.ಶರತ್ ಕುಮಾರ್ ಅವರ ಕಾರಿನಲ್ಲಿದ್ದ 9 ಲಕ್ಷ ರೂಪಾಯಿ...

ಚೆನ್ನೈ: ತಮಿಳುನಾಡಿನ ಖ್ಯಾತ ನಟ ಹಾಗೂ ರಾಜಕಾರಣಿ ಆರ್.ಶರತ್ ಕುಮಾರ್ ಅವರ ಕಾರಿನಲ್ಲಿದ್ದ 9 ಲಕ್ಷ ರೂಪಾಯಿ ನಗದು ಹಣವನ್ನು ಚುನಾವಣಾಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.

ಶರತ್ ಕುಮಾರ್ ಅವರು ಮೇ 16ರಂದು ನಡೆಯಲಿರುವ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಟುಟಿಕೊರಿನ್ ಜಿಲ್ಲೆಯ ತಿರುಚೆಂದೂರು ವಿಧಾನಸಭಾ ಕ್ಷೇತ್ರದಿಂದ ಎಡಿಎಂಕೆ ಪಕ್ಷದ ಗುರುತಿನೊಂದಿಗೆ ಸ್ಪರ್ಧಿಸುತ್ತಿದ್ದಾರೆ.

ಅಖಿಲ ಭಾರತ ಸಮತುವಾ ಮಕ್ಕಲ್ ಕಾಚಿ ಪಕ್ಷದ ಮುಖ್ಯಸ್ಥರಾಗಿರುವ ಶರತ್ ಕುಮಾರ್ ತಿರುಚೆಂದೂರಿನ ನಲ್ಲೂರು ವಿಲಕ್ಕು ಬಳಿ 9 ಲಕ್ಷ ರೂಪಾಯಿ ನಗದನ್ನು ಕಾರಿನಲ್ಲಿಟ್ಟುಕೊಂಡು ಪ್ರಯಾಣಿಸುತ್ತಿರುವಾಗ ವಿಶೇಷ ತಹಸೀಲ್ದಾರ್ ಪಿ.ವಲ್ಲಿಕನ್ನು ನೇತೃತ್ವದ ಕ್ಷಿಪ್ರಪಡೆಗೆ ಸಿಕ್ಕಿಬಿದ್ದಿದ್ದಾರೆ. ಖಜಾನೆಯಲ್ಲಿ ಹಣವನ್ನು ಠೇವಣಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಚುನಾವಣಾಧಿಕಾರಿಗಳು 80 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ರಾಜ್ಯದ ಒಬ್ಬ ಖ್ಯಾತ ನಟ ಹಾಗೂ ಪ್ರಮುಖ ರಾಜಕಾರಣಿ ಹಣವನ್ನು ಸಾಗಿಸುವಾಗ ಸಿಕ್ಕಿಬಿದ್ದದ್ದು ಇದೇ ಮೊದಲ ಸಲವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!