ಚೆನ್ನೈ: ನಾವಿಕ್ ನ್ನು ದೇಶಕ್ಕೆ ಸಮರ್ಪಿಸಿ ಮಹತ್ವದ ಮೈಲುಗಲ್ಲು ಸಾಧಿಸಿದ ಕೆಲವೇ ವಾರಗಳಲ್ಲಿ ಇಸ್ರೋ ತನ್ನ ಮೊದಲ ಪುನರ್ಬಳಕೆಯ ಉಡಾವಣಾ ವಾಹನ ತಾಂತ್ರಿಕ ಪ್ರದರ್ಶಕವನ್ನು ಈ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವ ಹಾದಿಯಲ್ಲಿದೆ. ಇದರ ಬಿಡುಗಡೆ ಮೇ 23ರಂದು ಎಂದು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆಯಾದರೂ ಅಂತಿಮ ನಿರ್ಧಾರ ಮಿಷನ್ ರೆಡಿನೆಸ್ ರಿವ್ಯೂ ಸಮಿತಿ ಇದೇ 11ರಂದು ನಿರ್ಧರಿಸಲಿದೆ. ಸಮಿತಿಯ ಅಧ್ಯಕ್ಷ ಬಿಎನ್ ಸುರೇಶ್ ಅವರು ಆರಂಭಕ್ಕೆ ತಾಂತ್ರಿಕ ತೆರವು ನೀಡಲಿದ್ದಾರೆ.
ಇದೊಂದು ಹೊಸ ತಂತ್ರಜ್ಞಾನವಾಗಿದ್ದು, ಇಸ್ರೋ ವಿಜ್ಞಾನಿಗಳು ಮತ್ತೊಂದು ಸಾಧನೆ ಮಾಡಲು ಹೊರಟಿದ್ದಾರೆ.
ಈ ಕುರಿತು ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಪಿ. ಕುನ್ಹಿಕೃಷ್ಣನ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿ, ಬಾಹ್ಯಾಕಾಶಬಂದರಿಗೆ ಎಲ್ಲಾ ವ್ಯವಸ್ಥೆಗಳು ಆಗಮಿಸಿದ್ದು, ಜೋಡಣೆ ಕಾರ್ಯ ವೇಳಾಪಟ್ಟಿಯಂತೆ ಸರಾಗವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬಾಹ್ಯಾಕಾಶಕ್ಕೆ ಬಿಟ್ಟ ಉಪಗ್ರಹದ ಬಗ್ಗೆ ಇನ್ರೋ ಎಲ್ಲಿಯೂ ಅಷ್ಟೊಂದು ಹೇಳಿಕೊಂಡು ಬರುವುದಿಲ್ಲ. ಆದರೆ ಈ ಪುನರ್ಬಳಕೆ ಉಡಾವಣಾ ವಾಹನ ತಾಂತ್ರಿಕ ಪ್ರದರ್ಶಕ ವಿಶಿಷ್ಟವಾಗಿದೆ. ಯಾಕೆಂದರೆ ಇದು ಭೂಮಿಯ ಸುತ್ತ ಉಪಗ್ರಹವನ್ನು ಕಕ್ಷೆಗೆ ಕಳುಹಿಸಿ ನಂತರ ವಾತಾವರಣಕ್ಕೆ ಪ್ರವೇಶಿಸಿ ಅಂತರಿಕ್ಷ ಮಿತವ್ಯಯಕ್ಕೆ ಅನುಕೂಲ ಮಾಡಿಕೊಡುತ್ತದೆ.