ದೇಶ

ದಾವೂದ್‌ ಸಹಚರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ ಸಾಧ್ಯತೆ

Sumana Upadhyaya

ನವದೆಹಲಿ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ನ ಡಿ ಕಂಪೆನಿಯ ಹತ್ತು ಪ್ರಮುಖ ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಚಾರ್ಜ್‌ಶೀಟ್‌ ಸಲ್ಲಿಸುವ ನಿರೀಕ್ಷೆಯಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ನಾಯಕರು ಮತ್ತು ಚರ್ಚುಗಳನ್ನು ಗುರಿ ಇರಿಸಿ ದಾಳಿ ನಡೆಸುವ ಮತ್ತು ಸಾಮಾಜಿಕ ಅಶಾಂತಿಯನ್ನು ಹುಟ್ಟು ಹಾಕುವ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದ್ದ ದಾವೂದ್‌ ಇಬ್ರಾಹಿಂ ನ ಡಿ ಕಂಪೆನಿಯ ಹತ್ತು ಮಂದಿ ಸದಸ್ಯರ ವಿರುದ್ಧ ಎನ್‌ಐಎ ಅಹಮದಾಬಾದ್ ಕೋರ್ಟ್ ನಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಲಿದೆ ಎಂದು ಎನ್‌ಐಎ ಮಹಾನಿರ್ದೇಶಕ ಶರದ್‌ ಕುಮಾರ್‌ ತಿಳಿಸಿದ್ದಾರೆ.

2014ರ ಲೋಕಸಭಾ ಚುನವಾಣೆಯ ಬಳಿಕ ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೊಡನೆಯೇ ಅವರ ಸರಕಾರವನ್ನು ಅಸ್ಥಿರಗೊಳಿಸಲು ದೇಶದಲ್ಲಿ ಸಾಮಾಜಿಕ ಅಶಾಂತಿಯನ್ನು ಹುಟ್ಟುಹಾಕುವ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಂಚನ್ನು ದಾವೂದ್‌ ಡಿ ಗ್ಯಾಂಗ್‌ ಸದಸ್ಯರು ರೂಪಿಸಿದ್ದರು ಎನ್ನುವ ವರದಿ ಬಹಿರಂಗಗೊಂಡಿತ್ತು.

 ಜಾವೇದ್ ಚಿಕ್ನ, ಜಹೀದ್ ಮಿಯಾನ್, ಹಾಜಿ ಪಟೇಲ್‌, ಮೊಹಮ್ಮದ್‌ ಯುನುಸ್‌ ಶೇಖ್‌, ಅಬ್ದುಲ್‌ ಸಮದ್‌, ಅಬೀದ್‌ ಪಟೇಲ್‌, ಮೊಹಮ್ಮದ್‌ ಅಲ್‌ತಾಫ್, ಮೊಹಿಸಿನ್‌ ಖಾನ್‌ ಮತ್ತು ನಸೀರ್‌ ಅಹ್ಮದ್‌.ದಾವೂದ್‌ ಗ್ಯಾಂಗಿನ ಹತ್ತು ಮುಖ್ಯ ಸದಸ್ಯರುಗಳಾಗಿದ್ದಾರೆ.

SCROLL FOR NEXT